ನವಜಾತ ಶಿಶುವಿನ ಮೃತದೇಹವನ್ನು ಕಚ್ಚಿ ಎಳೆದಾಡಿದ ಬೀದಿ ನಾಯಿಗಳು!

Prasthutha|

ಭುವನೇಶ್ವರ: ಸರ್ಕಾರಿ ಆಸ್ಪತ್ರೆಯ ಮುಂದೆ ನವಜಾತ ಶಿಶುವಿನ ದೇಹವನ್ನು ಬೀದಿ ನಾಯಿಗಳು ಕಚ್ಚಿ ಎಳೆದಾಡಿದ ಘಟನೆ ಹೃದಯ ವಿದ್ರಾವಕ ನಡೆದಿದೆ. ಒಡಿಶಾದ ಭದ್ರಾಕ್ ಜಿಲ್ಲಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

ನಂತರ ಬೀದಿ ನಾಯಿಗಳನ್ನು ಸ್ಥಳೀಯರು ಬೆನ್ನಟ್ಟಿ ಶವವನ್ನು ವಶಪಡಿಸಿಕೊಂಡಿದ್ದಾರೆ. ಜನರು ನಾಯಿಗಳನ್ನು ಬೆನ್ನಟ್ಟುತ್ತಿದ್ದಂತೆ ಶಿಶುವಿನ ದೇಹವನ್ನು ತ್ಯಜಿಸಿ ಓಡಿಹೋಗಿದೆ ಎಂದು ತಿಳಿದು ಬಂದಿದೆ.

- Advertisement -

ತಾನು ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಾಗ, ನವಜಾತ ಶಿಶುವಿನ ಮೃತದೇಹವನ್ನು ಬೀದಿ ನಾಯಿಗಳು ಕಚ್ಚಿ ಎಳೆದಾಡುವುದನ್ನು ನೋಡಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಹೇಳುತ್ತಾರೆ. ನಾನು ಆ ದೃಶ್ಯವನ್ನು ನೋಡಿ ಬೊಬ್ಬೆ ಹಾಕಿ ಅದರ ಹಿಂದೆ ಓಡಿದೆ. ಸ್ವಲ್ಪ ದೂರ ಓಡಿದಾಗ ಬೀದಿ ನಾಯಿಗಳು ನವಜಾತ ಶಿಶುವನ್ನು ತ್ಯಜಿಸಿ ಓಡಿಹೋದವು ಎಂದು ಪ್ರತ್ಯಕ್ಷದರ್ಶಿ ಹೇಳುತ್ತಾರೆ.

ಆಸ್ಪತ್ರೆಯಿಂದ ಈ ಎಡವಟ್ಟಾಗಿದೆ ಎಂದು ಆರೋಪಿಸಲಾಗಿದೆ. ಮಗುವಿನ ಮೃತದೇಹವನ್ನು ಆಸ್ಪತ್ರೆಯ ಅಧಿಕಾರಿಗಳು ತೆರೆದ ಸ್ಥಳದಲ್ಲಿ ಬಿಟ್ಟಿದ್ದರು ಎಂದು ವರದಿಯಾಗಿದೆ. ನಂತರ ಶವವನ್ನು ನಾಯಿಗಳು ಎಳೆದುಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

- Advertisement -