ಅವಧಿ ಮೀರಿದ ಐಸ್‌ಕ್ರೀಂ ಸೇವಿಸಿದ ಮಕ್ಕಳು ಅಸ್ವಸ್ಥ

Prasthutha|

ಚನ್ನಪಟ್ಟಣ: ಇಲ್ಲಿಯ ಮಿಲನ್ ಶಾದಿ ಮಹಲ್‌ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಸುಮಾರು 80ಕ್ಕೂ ಹೆಚ್ಚು ಮಂದಿ ಐಸ್‌ಕ್ರೀಂ ಸೇವಿಸಿದ್ದು,ಅವರ ಪೈಕಿ ಸುಮಾರು 40 ಮಕ್ಕಳಿಗೆ ಐಸ್‌ಕ್ರೀಂ ತಿಂದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ತೀವ್ರ ಅಸ್ವಸ್ಥರಾಗಿದ್ದಾರೆ. ಬಳಿಕ ಅಸ್ವಸ್ಥರನ್ನು ಕೂಡಲೇ ಚನ್ನಪಟ್ಟಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

- Advertisement -

ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅವಧಿ ಮೀರಿದ ಐಸ್‌ಕ್ರೀಂ ಸೇವಿಸಿದ್ದೇ ಮಕ್ಕಳ ಅಸ್ವಸ್ಥತೆಗೆ ಕಾರಣ ಎನ್ನಲಾಗಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಚನ್ನಪಟ್ಟಣ ಟೌನ್ ಪೊಲೀಸರು ಘಟನೆ ನಡೆದ ಸ್ಥಳ, ಐಸ್‌ಕ್ರೀಂ ಪರಿಶೀಲನೆ ನಡೆಸಿದ್ದಾರೆ.

Join Whatsapp