ಹೆಚ್.ಡಿ. ರೇವಣ್ಣ 4 ದಿನ SIT ಕಸ್ಟಡಿಗೆ

Prasthutha|

ಬೆಂಗಳೂರು: ಹೆಚ್ ಡಿ. ರೇವಣ್ಣ ಅವರನ್ನು 4 ದಿನಗಳ ಕಾಲ SIT ಕಸ್ಟಡಿಗೆ ನೀಡಲಾಗಿದೆ.

- Advertisement -

ಕೋರಮಂಗಲದ 17ನೇ ACMM ನ್ಯಾಯಾಧೀಶರ ಮುಂದೆ ಎಸ್‌ಐಟಿ ಅಧಿಕಾರಿಗಳು ಹೆಚ್‌.ಡಿ ರೇವಣ್ಣ ಅವರನ್ನು ಹಾಜರು ಪಡಿಸಿದ್ದರು. ನ್ಯಾಯಧೀಶರ‌ ಮುಂದೆ‌ ರೇವಣ್ಣರನ್ನು‌ 5 ದಿನ‌ ಕಸ್ಟಡಿಗೆ ನೀಡುವಂತೆ ಎಸ್‌ಐಟಿ ಮನವಿ ಸಲ್ಲಿಸಿತ್ತು. ರೇವಣ್ಣ ಪರ ವಕೀಲರು ಭಾರೀ ವಾದ ಮಂಡಿಸಿದ್ದರು.

ಜಡ್ಜ್‌ ಮುಂದೆ ರಿಮೈಂಡ್‌ ಕಾಪಿ‌ ಸಲ್ಲಿಕೆ ಮಾಡಿರುವ ಎಸ್‌ಐಟಿ ಅಧಿಕಾರಿಗಳು, ರೇವಣ್ಣ ಅವರನ್ನು ಕಸ್ಟಡಿಗೆ ಕೇಳಲು ಸುಮಾರು 15 ಅಂಶಗಳನ್ನು ಉಲ್ಲೇಖ ಮಾಡಿದ್ದರು. ಕೊನೆಗೆ ಎಸ್ಐಟಿಯ ಮನವಿ ಪುರಸ್ಕರಿಸಿದ ನ್ಯಾಯಾಧೀಶರು, ಮಾಜಿ ಪ್ರಧಾನಿಯ ಮಗನನ್ನು 4 ದಿನಗಳ ಕಾಲ SIT ಕಸ್ಟಡಿಗೆ ನೀಡಿದ್ದಾರೆ.

- Advertisement -

ನ್ಯಾಯಾಧೀಶರ ಬಳಿಗೆ ತಲುಪುವ ಮೊದಲು ತನ್ನ ಬಂಧನಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ನನ್ನ ಬಂಧನವಾಗಿರುವುದು ರಾಜಕೀಯ ಪಿತೂರಿ ಎಂದು ಹೇಳಿದ್ದರು.

Join Whatsapp