ಬಂಟ್ವಾಳ: ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತ

Prasthutha|

ಬಂಟ್ವಾಳ: ತಾಲ್ಲೂಕಿನ ನಾವೂರು ಎಂಬಲ್ಲಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟ‌ ದುರಂತ ಇಂದು ಸಂಜೆ ನಡೆದಿದೆ.

- Advertisement -

ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಅಶ್ರಾ (11) ಮತ್ತು ಇಲಿಯಾಸ್ ಅವರ ಪುತ್ರಿ ಮರಿಯಂ ನಾಶಿಯಾ (14 ) ಮೃತ ಬಾಲಕಿಯರು. ಬಾಲಕಿಯರು ನಾವೂರು ಸಮೀಪದ ಮೈಂದಾಳದಲ್ಲಿ ಸಂಬಂಧಿಕರ ಮನೆಗೆ ಬಂದಿದ್ದರು. ಮನೆಯವರೊಂದಿಗೆ ಸಂಜೆ ಮಕ್ಕಳು ಸ್ಥಳೀಯ ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿಗೆ ತೆರಳಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಮಕ್ಕಳು ನೀರಿನಲ್ಲಿ ಮುಳುಗುವುದನ್ನು ಕಣ್ಣಾರೆ ಕಂಡರೂ ಈಜು ಬಾರದ ಪೋಷಕರು ಅಸಹಾಯಕರಾಗಿ ರೋದಿಸುತ್ತಾ ನಿಲ್ಲಬೇಕಾದ ಸನ್ನಿವೇಶ ನಡೆದಿತ್ತು ಎನ್ನಲಾಗಿದೆ.

- Advertisement -

ಮೂಲತಃ ನಾವೂರು ನಿವಾಸಿ ಆಗಿರುವ ಇಲ್ಯಾಸ್ ಉಳ್ಳಾಲದಲ್ಲಿ ವಾಸವಾಗಿದ್ದು, ಇಲ್ಲಿನ ನಾವೂರು ಸಮೀಪದ ಮೈಂದಾಳದಲ್ಲಿ ಸಂಬಂಧಿಕರ ಮನೆಗೆ ಬಂದಿದ್ದರು.

Join Whatsapp