ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕಿ ನಿರ್ಮಲಾ ಸಪ್ರೆ ಬಿಜೆಪಿ ಸೇರ್ಪಡೆ

Prasthutha|

ಮಧ್ಯಪ್ರದೇಶ: ಬಿನಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಿರ್ಮಲಾ ಸಪ್ರೆ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

- Advertisement -

ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಮೂರನೇ ಶಾಸಕಿ ಇವರಾಗಿದ್ದಾರೆ.

ಸಾಗರ್ ಜಿಲ್ಲೆಯ ರಹತ್‌ಗಢದಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಪ್ರೆ, ಕ್ಷೇತ್ರದ ಜನತೆಗೆ ಹಲವಾರು ಭರವಸೆಗಳನ್ನು ನೀಡಿದ್ದರೂ ಈಡೇರಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಪ್ರಸ್ತುತ ಅಧಿಕಾರದಿಂದ ಹೊರಗಿದೆ. ವಿರೋಧ ಪಕ್ಷವು ಅಭಿವೃದ್ಧಿಯ ಯಾವುದೇ ಅಜೆಂಡಾವನ್ನು ಹೊಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನೇತೃತ್ವದಲ್ಲಿ ನಾನು ಅಭಿವೃದ್ಧಿಯ ಹೊಳೆಗೆ ಸೇರಿಕೊಂಡಿದ್ದೇನೆ ಎಂದು ಸಪ್ರೆ ಹೇಳಿದ್ದಾರೆ..

Join Whatsapp