ಪಿಎಫ್ ಐ ನಿಷೇಧ ಪ್ರಕರಣ: ಎಸ್ ಡಿಪಿಐ ದೆಹಲಿ ಅಧ್ಯಕ್ಷ ಸಹಿತ ಇಬ್ಬರಿಗೆ ಜಾಮೀನು

Prasthutha|

ಹೊಸದಿಲ್ಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಇಬ್ಬರು ಮುಸ್ಲಿಂ ರಾಜಕಾರಣಿಗಳಾದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ದೆಹಲಿ ಘಟಕದ ಅಧ್ಯಕ್ಷ ಇಸ್ರಾರ್ ಅಲಿ ಖಾನ್ ಮತ್ತು ಮೊಹಮ್ಮದ್ ಶಾಮೂನ್ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ.

- Advertisement -


ಪಿಎಫ್ಐ ನಿಷೇಧಕ್ಕೆ ಮುಂಚಿತವಾಗಿ ಆಗಸ್ಟ್ 27 ರಂದು ಖಾನ್ ಮತ್ತು ಶಾಮೂನ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿತ್ತು. ಅಕ್ಟೋಬರ್ 3 ರಂದು ನ್ಯಾಯಾಂಗ ಬಂಧನದಿಂದ ಬಿಡುಗಡೆಯಾದ ನಂತರ, ಪುನಃ ಅಕ್ಟೋಬರ್ 5 ರಂದು ಪ್ರಸ್ತುತ ಪ್ರಕರಣದಲ್ಲಿ ಬಂಧಿಸಲಾಯಿತು.


ಖಾನ್ ಗೆ 60 ವರ್ಷ ಮತ್ತು ಶಮೂನ್ ಗೆ 71 ವರ್ಷ. ಖಾನ್ ಮತ್ತು ಶಾಮೂನ್ ಅವರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂಜಯ್ ಖನಗ್ವಾಲ್ ಅವರು ಡಿಸೆಂಬರ್ 3, ಶನಿವಾರ ಹೊರಡಿಸಿದ ಜಾಮೀನು ಆದೇಶದ ಪ್ರಕಾರ ಜಾಮೀನು ಮಂಜೂರು ಮಾಡಿದ್ದಾರೆ.

- Advertisement -


ಖಾನ್ ಮತ್ತು ಶಾಮೂನ್ ಪರವಾಗಿ ವಕೀಲರಾದ ಅಬೂಬಕರ್ ಸಬ್ ಬಾಗ್ ಮತ್ತು ಶ್ರೀ ಕಾರ್ತಿಕ್ ಮುರುಕುಟ್ಲಾ ಹಾಜರಾಗಿದ್ದರು.

Join Whatsapp