ಗುಜರಾತ್ ನಲ್ಲಿ ರೋಡ್ ಶೋ: ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

Prasthutha|

ಅಹಮದಾಬಾದ್: ಗುಜರಾತ್ ಚುನಾವಣೆಗೆ ಮತದಾನ ಮಾಡಲು ಹೋದ ಪ್ರಧಾನಿ ಮೋದಿ ರೋಡ್ ಶೋ ನಡೆಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದ್ದೇವೆ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹೇಳಿದ್ದಾರೆ.

- Advertisement -


ಒಂದು ವೋಟ್ ಮಾಡೋಕೆ ಪ್ರಧಾನಿ ನರೇಂದ್ರ ಮೋದಿ ಎರಡೂವರೆ ಗಂಟೆ ರೋಡ್ ಶೋ ಮಾಡಿದ್ದಾರೆ. ಭಾರತದ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಜನ ಹಾಕುವ ವೋಟ್ ನಷ್ಟೇ ಮೌಲ್ಯ ಪ್ರಧಾನಿ ಹಾಕುವ ವೋಟ್ ಗಿರುತ್ತದೆ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಪ್ರಧಾನಿ ವೋಟ್ ಮಾಡೋಕೆ ತೆರಳಿದರೆ ಎರಡೂವರೆ ಗಂಟೆಗಳ ಕಾಲ ರೋಡ್ ಶೋ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.


ಕೊನೇ ಹಂತದ ಚುನಾವಣೆಯಲ್ಲಿ ಒಟ್ಟು 93 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ರಾಣಿಪ್ ಮತಗಟ್ಟೆಯ ನಿಶಾನ್ ಪಬ್ಲಿಕ್ ಸ್ಕೂಲ್ ನಲ್ಲಿ ಮತದಾನಕ್ಕೆ ಆಗಮಿಸುವ ವೇಳೆ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಮೋದಿ ಆಗಮನದ ಹಿನ್ನಲೆಯಲ್ಲಿ ಸಾಕಷ್ಟು ಜನ ಕೂಡ ಜಮಾಯಿಸಿದ್ದರು. ಈ ವೇಳೆ ಕೆಲ ಮೀಟರ್ ಗಳ ದೂರದಲ್ಲಿಯೇ ತಮ್ಮ ಕಾರ್ ಅನ್ನು ನಿಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದ ನಡೆದುಕೊಂಡೇ ಬಂದು ಮತದಾನ ಮಾಡಿದ್ದರು. ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಜನರತ್ತ ಕೈಬೀಸಿಕೊಂಡೇ ಮತಗಟ್ಟೆಗೆ ಆಗಮಿಸಿದ್ದರು.

- Advertisement -


ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

Join Whatsapp