ಮುತ್ತೂರು ಗ್ರಾಮದಲ್ಲಿ ಇನಾಯತ್ ಅಲಿ ಬಿರುಸಿನ ಪ್ರಚಾರ; ಹಲವು ಮುಖಂಡರು ಕಾಂಗ್ರೆಸ್ ಸೇರ್ಪಡೆ

Prasthutha|

ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರು ಇಂದು ಮುತ್ತೂರು ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿದರು.

- Advertisement -


ಮುತ್ತೂರಿನಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್’ನ ಗ್ಯಾರಂಟಿಗಳ ಕುರಿತು ಮಾಹಿತಿ ನೀಡಿ, ಕ್ಷೇತ್ರದ ಪ್ರಗತಿಗಾಗಿ ಕಾಂಗ್ರೆಸ್ ಗೆ ಬೆಂಬಲ ನೀಡುವಂತೆ ಮತಯಾಚಿಸಿದರು.


ಚುನಾವಣಾ ಪ್ರಚಾರದ ಭಾಗವಾಗಿ ಇಂದು ಮುತ್ತೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ನೌಶಾದ್ ಮುತ್ತೂರು ಅವರ ನಿವಾಸದಲ್ಲಿ ಸಭೆ ನಡೆಸಿದ ಇನಾಯತ್ ಅಲಿ, “ಮಂಗಳೂರು ಉತ್ತರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತ ನೀಡುವಂತೆ ಕೋರಿದ್ದೇನೆ. ಈ ವೇಳೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜನವಿರೋಧಿ ಬಿಜೆಪಿ ಸರಕಾರಕ್ಕೆ ಈ ಬಾರಿಯ ಚುನಾವಣೆಯಲ್ಲಿ ಮತದಾರರು ಬೆಂಬಲ ನೀಡುವುದಿಲ್ಲ. ಕ್ಷೇತ್ರದ ತುಂಬಾ ಕಾರ್ಯಕರ್ತರು ಹುಮ್ಮಸ್ಸಿನಿಂದ ಪ್ರಚಾರ ನಡೆಸುತ್ತಿದ್ದು ಗೆಲ್ಲುವ ವಿಶ್ವಾಸ ದುಪ್ಪಟ್ಟಾಗಿದೆ” ಎಂದು ಹೇಳಿದರು.

- Advertisement -


ಈ ವೇಳೆ ಹಲವು ಮುಖಂಡರು, ಇತರ ಪಕ್ಷಗಳ ಕಾರ್ಯಕರ್ತರು ಇನಾಯತ್ ಅಲಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

Join Whatsapp