ಮುಸ್ಲಿಮ್ ಯುವಕನಿಗೆ ಹಿಂದುತ್ವವಾದಿಗಳಿಂದ ಗುಂಪು ಹಲ್ಲೆ | ಐವರ ಬಂಧನ

Prasthutha|

ಅಜ್ಮೀರ್ : ಮುಸ್ಲಿಮ್ ಯುವಕನ ಮೇಲೆ ಹಿಂದುತ್ವದ ಅಮಲೇರಿಸಿಕೊಂಡ ಗುಂಪು ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ತಾನದಿಂದ ವರದಿಯಾಗಿದೆ. ಪಾಕಿಸ್ತಾನಕ್ಕೆ ತೆರಳುವಂತೆ ಒತ್ತಾಯಿಸಿ ಹಲ್ಲೆ ನಡೆಸುತ್ತಿರುವುದು ವೈರಲ್ ಆದ ವೀಡಿಯೋ ತುಣುಕು ಮೂಲಕ ಈ ದುಷ್ಕ್ರತ್ಯ ಬಹಿರಂಗವಾಗಿದೆ.

- Advertisement -

ಈ ಘಟನೆಗೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರನ್ನು ಲಲಿತ್ ಶರ್ಮಾ, ತೇಜಪಾಲ್, ರೋಹಿತ್ ಶರ್ಮಾ, ಸುರೇಂದ್ರ ಮತ್ತು ಶೈಲೇಂದ್ರ ಎಂದು ಗುರುತಿಸಲಾಗಿದೆ. ರಾಜಸ್ತಾನದ ರಾಮಗಂಜ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತ ಯುವಕನನ್ನು ಪತ್ತೆಹಚ್ಚಲು ಪೊಲೀಸರು ವಿಫಲವಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಸಂತ್ರಸ್ತ ಯುವಕ ತನ್ನನ್ನು ಬಿಟ್ಟುಬಿಡುವಂತೆ ದುಷ್ಕರ್ಮಿಗಳ ಬಳಿ ಬೇಡುತ್ತಿರುವ ದೃಶ್ಯ ಆ ವೀಡಿಯೋದಲ್ಲಿ ವೈರಲ್ ಆಗಿದೆ. ಅಲ್ಲದೆ ಒಬ್ಬ ಆರೋಪಿಯು ಸಂತ್ರಸ್ತನ ಹುಡುಗನ ತಲೆಗೆ ಕಾಲಲ್ಲಿ ಒದೆಯುತ್ತಿರುವ ದೃಶ್ಯವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕೋಮು ಸೌಹಾರ್ದತೆಗೆ ಭಂಗ ತರುವ ನಿಟ್ಟಿನಲ್ಲಿ ವಿವಿಧ ಸೆಕ್ಷನ್ ಅಡಿಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಮುಖೇಶ್ ಕುಮಾರ್ ಸೋನಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

- Advertisement -

ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದು ನ್ಯಾಯಾಧೀಶರು ಅರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.



Join Whatsapp