ನಕಲಿ ನೋಟು ಜಾಲ ಪತ್ತೆ: 500 ರೂ. ಮುಖಬೆಲೆಯ 62 ಬಂಡಲ್ ಜಪ್ತಿ

Prasthutha|

ರಾಯಚೂರು: ಜಿಲ್ಲೆಯ ಲಿಂಗಸುಗೂರಿನಲ್ಲಿ ನಕಲಿ ನೋಟಿನ ಜಾಲ ಪತ್ತೆಯಾಗಿದೆ. ಮನೆಯೊಂದರಲ್ಲಿ ಅಕ್ರಮ ಮದ್ಯ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಮೇರೆಗೆ ಜಪ್ತಿ ಮಾಡಲು ಹೋದ ಅಧಿಕಾರಿಗಳು ನಕಲಿ ನೋಟ್ ಕಂಡು ಶಾಕ್ ಆಗಿದ್ದಾರೆ. ದಾಳಿ ವೇಳೆ ಮದ್ಯ ಸಿಗದಿದ್ದರೂ ಕಂತೆ ಕಂತೆ ನಕಲಿ ನೋಟು ಪತ್ತೆಯಾಗಿವೆ.

- Advertisement -


ಒಂದು ಕಡೆ 500 ರೂ. ಮುಖಬೆಲೆಯ ನೋಟುಗಳು, ಮತ್ತೊಂದು ಕಡೆ ಬಿಳಿ ಪೇಪರ್ ಇರುವ ನೋಟುಗಳು ಪತ್ತೆಯಾಗಿವೆ. ದಾಳಿ ವೇಳೆ 500 ರೂ. ಮುಖಬೆಲೆಯ 62 ಬಂಡಲ್ ಮುದ್ರಿತ ನೋಟು ಸಿಕ್ಕಿವೆ. ಲಿಂಗಸುಗೂರಿನ ಗೌಳೀಪುರ ಓಣಿಯಲ್ಲಿ ನಕಲಿ ನೋಟು ತಯಾರಿಕೆ ಜಾಲ ಪತ್ತೆಯಾಗಿದ್ದು, ನಕಲಿ ನೋಟು ತಯಾರಿಸುತ್ತಿದ್ದ ಚೋಟಾಸಾಬ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Join Whatsapp