ಕಳೆದ ಸಲಕ್ಕಿಂತ ಹೆಚ್ಚು ವೋಟುಗಳಿಂದ ಗೆಲ್ಲುವ ನಿರೀಕ್ಷೆ ಇದೆ: ಡಿಕೆ ಸುರೇಶ್

Prasthutha|

ರಾಮನಗರ: ಕ್ಷೇತ್ರದ ಎಲ್ಲ ಭಾಗಗಳಿಂದ ತಮಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಮತ್ತು ಕಳೆದ ಸಲಕ್ಕಿಂತ ಹೆಚ್ಚಿನ ಮತಗಳಿಂದ ಗೆಲ್ಲುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಹೇಳಿದರು.

- Advertisement -


ಈ ಬಗ್ಗೆ ಮಾತನಾಡಿದ ಅವರು, ಎಷ್ಟು ಮತಗಳ ಅಂತರ ಗೆಲುವು ಸಿಗಲಿದೆ ಅಂತ ಈಗಲೇ ಹೇಳಲಾಗದು, ಎಲ್ಲ ಭಾಗಗಳಲ್ಲಿ ಎಷ್ಟು ಪ್ರಮಾಣದ ಮತದಾನ ಆಗಿದೆ ಮತ್ತು ಇನ್ನೂ ಕೆಲ ಅಂಶಗಳನ್ನು ಅಳೆದು ತೂಗಿದ ಬಳಿಕ ಮತಗಳ ಅಂತರದ ಲೆಕ್ಕಾಚಾರ ಹಾಕಬಹುದು ಎಂದು ಹೇಳಿದರು.


ವಿಧಾನಸಭಾ ಚುನಾವಣೆಯಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಜನರು ಮರೆಯಬಾರದು ಎಂಬ ಉದ್ದೇಶದಿಂದ ಕಾರ್ಡ್ ಗಳ ರೂಪದಲ್ಲಿ ನೀಡಿದ್ದೇವೆ ಮತ್ತು ಕ್ಯೂಆರ್ ಕೋಡ್ ಬಗ್ಗೆ ಹೇಳೋದಾದರೆ ಅದನ್ನು ಬಿಜೆಪಿ ಶಾಸಕರೊಬ್ಬರಿಂದ ಕಲಿತದ್ದು ಎಂದು ಸುರೇಶ್ ಹೇಳಿದರು.

Join Whatsapp