ಜೆದ್ದಾ: ಸೌದಿ ಅರೇಬಿಯದಲ್ಲಿ 2 ಡೋಸ್ ಲಸಿಕೆ ಪಡೆದವರು ನೇರವಾಗಿ ಸೌದಿ ಅರೇಬಿಯಕ್ಕೆ ಪ್ರಯಾಣ ಬೆಳೆಸಬಹುದೆಂದು ಸೌದಿ ಪ್ರಾಧಿಕಾರವು ತನ್ನ ಅಧಿಕೃತ ಹೇಳಿಕೆಯಲ್ಲಿ ಸ್ಪಷ್ಟಪಡಿಸಿವೆ.
ಸೌದಿ ಅರೇಬಿಯದಲ್ಲಿ ಕೋವಿಡ್ ನ 2 ಡೋಸ್ ಲಸಿಕೆಯನ್ನು ಪಡೆದು ಭಾರತಕ್ಕೆ ವಾಪಸಾಗಿದ್ದ ಅನಿವಾಸಿ ಭಾರತೀಯರು ಸೇರಿದಂತೆ 9 ರಾಷ್ಟ್ರಗಳ ಪ್ರಯಾಣಿಕರು ನೇರವಾಗಿ ಸೌದಿಗೆ ಪ್ರಯಾಣಿಸಬಹುದೆಂದು ತನ್ನ ನೂತನ ಹೇಳಿಕೆಯಲ್ಲಿ ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.
ರಜೆಯ ನಿಮಿತ್ತ ಭಾರತಕ್ಕೆ ವಾಪಸಾಗಿದ್ದ ಅನಿವಾಸಿಯರು ಮೂರನೇ ರಾಷ್ಟ್ರದಲ್ಲಿ ಕ್ವಾರಂಟೈನ್ ಆಗುವ ಸಮಸ್ಯೆಯಿಂದ ತುಂಬಾ ಸಂಕಷ್ಟಕ್ಕೆ ಸಿಲುಕಿದ್ದರು. ಸೌದಿ ಅರೇಬಿಯದ ಈ ತೀರ್ಮಾನವು ಅಪಾರ ಸಂಖ್ಯೆಯ ಅನಿವಾಸಿಯರಿಗೆ ವರದಾನವಾಗಲಿದೆ.