ಉಳ್ಳಾಲ: ಸ್ಪೀಕರ್ ಯು.ಟಿ. ಖಾದರ್ ಮತ ಚಲಾವಣೆ

Prasthutha|

ಉಳ್ಳಾಲ: ಸ್ಪೀಕರ್ ಯು.ಟಿ .ಖಾದರ್ ಅವರು ಬೋಳಿಯಾರು ಗ್ರಾಮದ ಜಾರದಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಟುಂಬ ಸಮೇತರಾಗಿ ಮತ ಚಲಾಯಿಸಿದರು.

- Advertisement -


ಈ ವೇಳೆ ಮಾತನಾಡಿದ ಖಾದರ್ ಅವರು ಜೀವನದಲ್ಲಿ ಸಮಾನತೆ ಕಾಣುವುದು ಮತದಾನವೊಂದರಲ್ಲಿ ಮಾತ್ರ. ಎಷ್ಟೇ ಕಡು ಬಡವನಾದರೂ, ಆಗರ್ಭ ಶ್ರೀಮಂತನಾದರೂ ಎಲ್ಲರಿಗೂ ಒಂದೇ ಮತದಾನದ ಹಕ್ಕು ಮಾತ್ರ ಇರುತ್ತದೆ. ಈ ಸಮಾನತೆಯ ಸಾಂವಿಧಾನಿಕ ಹಕ್ಕನ್ನ ಚಲಾಯಿಸೋದು ನಮ್ಮೆಲ್ಲರ ಕರ್ತವ್ಯ. ದೇಶದ ಹಿತಕ್ಕಾಗಿ ಎಲ್ಲರೂ ಉತ್ಸಾಹದಿಂದ ಮತ ಚಲಾಯಿಸುವಂತೆ ಕರೆ ನೀಡಿದರು.

Join Whatsapp