ರೈತರ ಹೋರಾಟಕ್ಕೆ ರಿಹಾನ್ನಾ, ಗ್ರೆಟಾ ಥಂಬರ್ಗ್ ಬೆಂಬಲ : ಬಿಜೆಪಿ ಐಟಿ ಸೆಲ್ ‘ಭಕ್ತ’ರ ಪಾಡಿನ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕ ವ್ಯಂಗ್ಯ

Prasthutha|

ರೈತರ ಹೋರಾಟಕ್ಕೆ ರಿಹಾನ್ನಾ, ಗ್ರೆಟಾ ಥಂಬರ್ಗ್ ಬೆಂಬಲ : ಬಿಜೆಪಿ ಐಟಿ ಸೆಲ್ ‘ಭಕ್ತ’ರ ಪಾಡಿನ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ವ್ಯಾಪಕ ವ್ಯಂಗ್ಯ

- Advertisement -

ನವದೆಹಲಿ : ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ‘ರೈತರ ಹೋರಾಟ’ ಕುರಿತ ಹಲವು ವಿಷಯಗಳು ಟ್ರೆಂಡಿಂಗ್ ಆಗುತ್ತಲೇ ಇವೆ. ಆದರೆ, ಇಂದು ಅದು ಮತ್ತೊಂದು ಹಂತಕ್ಕೆ ತಲುಪಿದ್ದು, ರೈತರ ಹೋರಾಟ ಬೆಂಬಲಿಸಿದ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳಾದ ರಿಹಾನ್ನಾ ಮತ್ತು ಗ್ರೆಟಾ ಥಂಬರ್ಗ್ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಆದರೆ, ಇನ್ನೊಂದೆಡೆ ಇದೇ ವಿಷಯಕ್ಕೆ ಸಂಬಂಧಿಸಿ ಬಿಜೆಪಿ ಐಟಿ ಸೆಲ್ ಕಾರ್ಯಕರ್ತರನ್ನು ಸೋಶಿಯಲ್ ಮೀಡಿಯಾ ಬಳಕೆದಾರರು ಹಾಸ್ಯದ ಸರಕಾಗಿಸಿ, ಸರಿಯಾಗಿ ಚಾಟಿ ಬೀಸುತ್ತಿರುವುದೂ ಟ್ರೆಂಡಿಂಗ್ ಆಗಿದೆ.

ದೆಹಲಿಯಲ್ಲಿ ಬಿಜೆಪಿ ಸರಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟದ ಬಗ್ಗೆ ಅಂತಾರಾಷ್ಟ್ರೀಯ ಜನಪ್ರಿಯ ಪಾಪ್ ಗಾಯಕಿ ರಿಹಾನ್ನಾ ಟ್ವೀಟ್ ಮಾಡುತ್ತಿದ್ದಂತೆ ವಿಷಯ ಜಾಗತಿಕ ಸೆಲೆಬ್ರಿಟಿಗಳ ಗಮನ ಸೆಳೆದಿತ್ತು. ಭಾರತದಲ್ಲಂತೂ ರಿಹಾನ್ನಾಗೆ ಪ್ರೀತಿಪೂರ್ವಕ ಬೆಂಬಲ ದೇಶಾದ್ಯಂತ ಹರಿದುಬಂತು. ಇದರ ಬೆನ್ನಲ್ಲೇ ಇನ್ನೋರ್ವ ಸೆಲೆಬ್ರಿಟಿ ಗ್ರೆಟಾ ಥಂಬರ್ಗ್ ಕೂಡ ಭಾರತದ ರೈತರ ಹೋರಾಟ ಬೆಂಬಲಿಸಿ ಟ್ವೀಟ್ ಮಾಡಿದ್ದರು.

- Advertisement -

ಇವೆಲ್ಲಾ ಬೆಳವಣಿಗೆಗಳಿಂದ ರಿಹಾನ್ನಾ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಯಿತು. #FarmersProtest ಹ್ಯಾಶ್ ಟ್ಯಾಗ್ ಕೂಡ ಟ್ರೆಂಡಿಂಗ್ ಆಯಿತು. ಈ ನಡುವೆ, ಭಾರತದಲ್ಲಿ ಬಿಜೆಪಿ ಸರಕಾರದ ವಿರುದ್ಧ ಯಾರೇ ಮಾತನಾಡಿದರೂ, ದೇಶದ್ರೋಹಿಗಳು, ಪಾಕಿಸ್ತಾನೀಯರು, ಭಯೋತ್ಪಾದಕರು ಎಂದು ಬಿಂಬಿಸುತ್ತಿದ್ದ ಬಿಜೆಪಿ ಐಟಿ ಸೆಲ್ ಕಾರ್ಯಕರ್ತರು ಮತ್ತು ಮಾಧ್ಯಮಗಳನ್ನು ಛೇಡಿಸಿ ಸಾಕಷ್ಟು ಮೆಮೆಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ.

ರಿಹಾನ್ನಾ ಮತ್ತು ಗ್ರೆಟಾ ಥಂಬರ್ಗ್ ಅವರನ್ನು ಟೀಕಿಸಲು ಬಿಜೆಪಿ ಐಟಿ ಸೆಲ್ ‘ಭಕ್ತರು’ ಏನೆಲ್ಲಾ ಕಸರತ್ತು ಮಾಡುತ್ತಿರಬಹುದು ಎಂಬುದರ ಬಗ್ಗೆ ಕುತೂಹಲಕಾರಿ, ನಗೆಗಡಲಲ್ಲಿ ತೇಲಿಸುವ ಸಂದೇಶಗಳು ಹರಿದಾಡುತ್ತಿವೆ.

ರೈತರ ಹೋರಾಟದ ವಿಷಯದಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜಾಗುತ್ತಿದ್ದರೂ, ಈ ಬಗ್ಗೆ ಯಾವುದೇ ರೀತಿ ತಲೆಕೆಡಿಸಿಕೊಳ್ಳದೆ ಬಿಜೆಪಿ ಭಂಡತನ ಮೆರೆಯುತ್ತಿದೆ.

Join Whatsapp