ಏಕನಾಥ್ ಶಿಂಧೆ, ಇತರ ಬಂಡಾಯ ಶಾಸಕರು ಇಡಿ ಕಣ್ಗಾವಲಿನಲ್ಲಿದ್ದಾರೆ: ಸಂಸದ ಸಂಜಯ್ ರಾವತ್

Prasthutha|

ಮುಂಬೈ: ಏಕನಾಥ್ ಶಿಂಧೆ ಮತ್ತು ಕನಿಷ್ಠ 17-20 ಬಂಡಾಯ ಶಾಸಕರು ಜಾರಿ ನಿರ್ದೇಶನಾಲಯ (ಇಡಿ) ಕಣ್ಗಾವಲಿನಲ್ಲಿದ್ದು, ಈ ನಿಟ್ಟಿನಲ್ಲಿ ಪಕ್ಷಾಂತರ ಮಾಡಲು ಮುಂದಾಗಿದ್ದಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಗಂಭೀರವಾಗಿ ಆರೋಪಿಸಿದ್ದಾರೆ.

- Advertisement -

ವಿವಿಧ ಅಕ್ರಮ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಇತರ 10-15 ಬಂಡಾಯ ಶಾಸಕರು ಕೂಡ ಇಡಿ ನೋಟಿಸ್’ಗಳನ್ನು ಪಡೆಯುವ ಭೀತಿಯಲ್ಲಿದ್ದಾರೆ ಎಂದು ಶಿವಸೇನಾ ಮುಖಂಡ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ನನ್ನ ಪ್ರಕಾರ ಬಹುತೇಕ ಬಂಡಾಯ ಶಾಸಕರಿಗೆ ಇಡಿ ನೋಟಿಸ್ ನೀಡಿದೆ ಎಂದ ತಿಳಿಸಿದ ಅವರು, ಇಡಿಯನ್ನು ತೋರಿಸಿ ಬಿಜೆಪಿ ಅವರೆಲ್ಲರ ಮೇಲೆ ಒತ್ತಡ ಹೇರುತ್ತಿದೆ. ಇತರ ಶಾಸಕರು ಕೂಡ ತನಿಖಾ ಏಜೆನ್ಸಿಯ ಮೇಲ್ವಿಚಾರಣೆಯಲ್ಲಿರಬಹುದು ಎಂದು ಹೇಳಿದ್ದಾರೆ.

- Advertisement -

ಈ ಮಧ್ಯೆ ಪ್ರಸಕ್ತ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟನ್ನು ಬಗೆಹರಿಸುವ ಪ್ರಯತ್ನ ಮುಂದುವರಿಸಲಾಗುತ್ತಿದೆ.

Join Whatsapp