ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಇಂದೂ ಇಡಿ ಮುಂದೆ ಹಾಜರಾದ ಸ್ವಪ್ನಾ ಸುರೇಶ್

Prasthutha|

ಕೊಚ್ಚಿ: ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಸತತ ಎರಡನೇ ದಿನವೂ ತನ್ನ ಕೊಚ್ಚಿ ಕಚೇರಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

- Advertisement -

ಬುಧವಾರ ಇಡಿ ಆಕೆಯನ್ನು ಸುಮಾರು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿತು.

ಇಂದು ನ್ಯಾಯಾಲಯದಲ್ಲಿ  164 ಹೇಳಿಕೆಗೆ ಸಂಬಂಧಿಸಿದಂತೆ ಇಡಿ ಆಕೆಯ ವಿಚಾರಣೆ ನಡೆಸುತ್ತಿದೆ .ಈ ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪತ್ನಿ ಮತ್ತು ಮಗಳು ಭಾಗಿಯಾಗಿರುವ ಬಗ್ಗೆ ನ್ಯಾಯಾಲಯದಲ್ಲಿ ಘೋಷಿಸಿದ್ದೇನೆ ಎಂದು ಸ್ವಪ್ನಾ ಸುರೇಶ್ ಬಹಿರಂಗಪಡಿಸಿದ್ದರು.

Join Whatsapp