ಮುಂಬೈ: ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿಧಾನಸಭೆ ವಿಸರ್ಜಿಸಲಿದ್ದೇವೆ ಎಂದು ಹೇಳಿಕೆ ನೀಡಿದ್ದ ಶಿವಸೇನೆ ನಾಯಕ ಸಂಜಯ್ ರಾವತ್, ಇಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಗುವಾಹಟಿಯಲ್ಲಿರುವ 21 ಶಾಸಕರು ನಮ್ಮನ್ನು ಸಂಪರ್ಕಿಸಿದ್ದು ಶೀಘ್ರವೇ ಮುಂಬೈಗೆ ಹಿಂದಿರುಗಲಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶೀಘ್ರದಲ್ಲೇ ಸಿಎಂ ಅಧಿಕೃತ ನಿವಾಸ ವರ್ಷಾ ಬಂಗಲೆಗೆ ಮರಳಲಿದ್ದಾರೆ, ಗುವಾಹಟಿಯ 21 ಶಾಸಕರು ನಮ್ಮನ್ನು ಸಂಪರ್ಕಿಸಿದ್ದಾರೆ. ಅವರು ಮುಂಬೈಗೆ ಹಿಂದಿರುಗಿದ ಬಳಿಕ ನಮ್ಮೊಂದಿಗೆ ಇರಲಿದ್ದಾರೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಇದೀಗ ರಾವತ್ ಹೇಳಿಕೆಯು ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಿದೆ.
55 ಶಾಸಕರ ಪೈಕಿ 42 ಶಿವಸೇನೆ ಶಾಸಕರು ಬಂಡಾಯವೆದ್ದು, ಕ್ಯಾಬಿನೆಟ್ ಸಚಿವ ಏಕನಾಥ್ ಶಿಂಧೆ ಬಳಿ ಸೇರಿ ಅಸ್ಸಾಂ ಗೆ ಏರ್’ಲಿಫ್ಟ್ ಆಗಿದ್ದರು. ಬಳಿಕ ಕಳೆದ ರಾತ್ರಿ, ಸಿಎಂ ಉದ್ಧವ್ ರಾಜೀನಾಮೆಯ ಮಾತನ್ನಾಡಿ ಅಧಿಕೃತ ನಿವಾಸ ವರ್ಷಾ ತೊರೆದು ಖಾಸಗಿ ನಿವಾಸಕ್ಕೆ ತೆರಳಿದ್ದರು.