ರಣಜಿ ಟ್ರೋಫಿ ಫೈನಲ್: ಸರ್ಫರಾಝ್ ಖಾನ್ ಭರ್ಜರಿ ಶತಕ; ಮುಂಬೈ 351/8

Prasthutha|

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ನಾಲ್ಕನೇ ಶತಕದೊಂದಿಗೆ ಸರ್ಫರಾಝ್ ಖಾನ್ ಅವರು ಆಟ ಮುಂದುವರಿಸಿದ್ದು, ಗುರುವಾರ ಮಧ್ಯಪ್ರದೇಶದ ವಿರುದ್ಧದ ಫೈನಲ್’ನ ಎರಡನೇ ದಿನದ ಊಟದ ವಿರಾಮದ ವೇಳೆ ಮುಂಬೈ ತಂಡ 122 ಓವರ್’ಗಳಲ್ಲಿ 8 ವಿಕೆಟ್ ಕಳೆದುಕೊಂಡು 351 ರನ್ ಸಂಪಾದಿಸಿದೆ.

- Advertisement -

ಮೊದಲ ದಿನ ರಕ್ಷಣಾತ್ಮಕ ಶೈಲಿ ಆಟಕ್ಕೆ ಒತ್ತು ನೀಡಿದ್ದ ಸರ್ಫರಾಝ್ ಅವರು ಎರಡನೇ ದಿನವೂ ಕ್ರೀಸಿನಲ್ಲಿ ದೃಢವಾಗಿ ನಿಂತು ಆಟವಾಡಿದರು. ಲಂಚ್ ವೇಳೆ ಸರ್ಫರಾಝ್ ಅವರು ಮುಂಬೈ ಪರ ಅಜೇಯ 119 ರನ್ ಬಾರಿಸಿ ಆಟ ಮುಂದುವರಿಸಿದ್ದಾರೆ.

ರಣಜಿಯಲ್ಲಿ ಅವರು ಎರಡನೇ ಬಾರಿಗೆ 900+ ರನ್’ಗಳ ಗಡಿ ದಾಟಿದ ದಾಖಲೆ ನಿರ್ಮಿಸಿದ್ದಾರೆ. 2019/ 20 ರ ಸಾಲಿನಲ್ಲಿ ಅವರು 928 ರನ್ ಗಳಿಸಿದ್ದು, ಅಜಯ್ ಶರ್ಮಾ ಮತ್ತು ವಾಸೀಮ್ ಜಾಫರ್ ಬಳಿಕ ಈ ಸಾಧನೆ ಮಾಡಿದ ಮೂರನೇ ಆಟಗಾರರಾಗಿದ್ದಾರೆ.

- Advertisement -

ಮೊದಲ ದಿನ 5 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದ್ದ ಮುಂಬೈ ಎರಡನೇ ದಿನದಾಟದ ಎರಡನೇ ಎಸೆತದಲ್ಲೇ ಶಮ್ಸ್ ಮುಲಾನಿ ಅವರು ವೇಗಿ ಗೌರವ್ ಯಾದವ್ ಅವರ ಎಸೆತಕ್ಕೆ ಎಲ್.ಬಿ.ಡ್ಬ್ಯು ಬಲೆಗೆ ಬಿದ್ದರು.

ಸಂಕ್ಷಿಪ್ತ ಸ್ಕೋರ್‌ಗಳು: ಮುಂಬೈ 122 ಓವರ್‌ಗಳಲ್ಲಿ 351/8 (ಸರ್ಫರಾಜ್ ಖಾನ್ ಔಟಾಗದೆ 119, ಯಶಸ್ವಿ ಜೈಸ್ವಾಲ್ 78; ಅನುಭವ್ ಅಗರ್ವಾಲ್ 3/81, ಸರನ್ಶ್ ಜೈನ್ 2/31)

Join Whatsapp