ಸುಳ್ಳು ಸುದ್ದಿ, ಕಿರುಕುಳದ ಕುರಿತು ರಾಣಾ ಅಯ್ಯೂಬ್ ರ ಕ್ಷಮೆಯಾಚಿಸಿದ ವೆಬ್ ಸೈಟ್

Prasthutha|

ಹೈದರಾಬಾದ್: ಪತ್ರಕರ್ತ ರಾಣಾ ಅಯ್ಯೂಬ್ ಅವರು ದಿ ಸ್ಕೂಪ್ ಬೀಟ್ಸ್ ವಿರುದ್ಧ ನೀಡಿದ ದೂರಿನನ್ವಯ ಸುದ್ದಿ ವೆಬ್ ಸೈಟ್ ಫೆಬ್ರವರಿ 17 ರಂದು ಕ್ಷಮೆಯಾಚಿಸಿದೆ. ಸಮಸ್ಯೆ ಸೃಷ್ಟಿಸಿದ್ದ ತನ್ನ ಸಿಬ್ಬಂದಿಗಳನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಸ್ಕೂಪ್ ಬೀಟ್ಸ್ ತಿಳಿಸಿದೆ.

- Advertisement -

ದಿ ಸ್ಕೂಪ್ ಬೀಟ್ಸ್ ಎಂಬ ವೆಬ್ ಸೈಟ್ ತನ್ನ ವಿರುದ್ಧ ಸುಳ್ಳು ಸುದ್ದಿ ಮತ್ತು ಪೂರ್ವಯೋಜಿತ ಕಿರುಕುಳಕ್ಕೆ ಸಂಬಂಧಿಸಿದಂತೆ ರಾಣಾ ಅಯ್ಯೂಬ್ ಅವರು ಜನವರಿ 27 ರಂದು ಪೊಲೀಸರಿಗೆ ದೂರು ನೀಡಿದ್ದರು.

ಪ್ರಖ್ಯಾತ ಪತ್ರಕರ್ತೆ ಈ ಕುರಿತು ಪ್ರತಿಕ್ರಿಯಿಸಿ, ವೆಬ್ ಸೈಟ್ ನ ಯೂಟ್ಯೂಬ್ ಚಾನೆಲ್ ನಲ್ಲಿ ‘ಸೌದಿ ಅರೇಬಿಯಾ ರಾಣಾ ಅಯ್ಯೂಬ್ ಅನ್ನು ನಿಷೇಧಿಸಿದೆ’ ಎಂಬ ಶೀರ್ಷಿಕೆಯ ವೀಡಿಯೊದೊಂದಿಗೆ ಪೋಸ್ಟ್ ಮಾಡಿದ್ದು, ಇದರ ಆಧಾರರಲ್ಲಿ ರಾಣಾ ಅಯ್ಯೂಬ್ ದೂರು ದಾಖಲಿಸಿದ್ದರು.

- Advertisement -

ಈ ಮಧ್ಯೆ ಅಯ್ಯೂಬ್ ಕೂಡ ಟ್ವಿಟ್ಟರ್ ನಲ್ಲಿ ವೀಡಿಯೋಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

Join Whatsapp