ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ 25 ಲಕ್ಷ ರೂ. ಲಂಚ ಕೇಳಿದ ಆರೋಪ | ಖ್ಯಾತ ಶೂಟರ್ ವಾರ್ತಿಕಾ ಸಿಂಗ್ ದೂರು ದಾಖಲು

Prasthutha|

ಅಮೇಠಿ : ಪ್ರಧಾನಿ ನರೇಂದ್ರ ಮೋದಿ ಅವರು ತಾನು ಭ್ರಷ್ಟಾಚಾರದ ಕಡುವಿರೋಧಿ ಎಂಬಂತೆ ಭಾಷಣ ಬಿಗಿಯುತ್ತಾರೆ. ಆದರೆ, ಅವರ ಆಪ್ತರಲ್ಲೊಬ್ಬರಾದ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧವೇ ಈಗ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಕೇಂದ್ರ ಮಹಿಳಾ ಆಯೋಗದ ಸದಸ್ಯೆಯಾಗಿ ಮಾಡಲು ತನ್ನಿಂದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಇತರ ಮೂವರು 25 ಲಕ್ಷ ರೂ. ಲಂಚ ಕೇಳಿದ್ದಾರೆ ಎಂದು ಖ್ಯಾತ ಶೂಟರ್ ವಾರ್ತಿಕಾ ಸಿಂಗ್ ದೂರು ದಾಖಲಿಸಿದ್ದಾರೆ.

ಕೇಂದ್ರ ಮಹಿಳಾ ಆಯೋಗದ ಸದಸ್ಯೆಯಾಗಲು 1 ಕೋಟಿ ರೂ. ಕೊಡಬೇಕಾಗುತ್ತದೆ, ಆದರೆ ನಿಮ್ಮ ಪ್ರೊಫೈಲ್ ನೋಡಿ ಅದನ್ನು 25 ಲಕ್ಷ ರೂ.ಗೆ ಇಳಿಸಲಾಗಿದೆ ಎಂದು ಸ್ಮೃತಿ ಇರಾನಿ ಮತ್ತು ಇತರ ಇಬ್ಬರು ತನಗೆ ತಿಳಿಸಿರುವುದಾಗಿ ವಾರ್ತಿಕಾ ಸಿಂಗ್ ಆಪಾದಿಸಿದ್ದಾರೆ. ಸ್ಮೃತಿ ಇರಾನಿಯ ಆಪ್ತರಲ್ಲಿ ಒಬ್ಬರು ತನ್ನ ಬಳಿ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ. ಹೀಗಾಗಿ ಎಲ್ಲರ ಮುಂದೆ ವಿಷಯ ಬಹಿರಂಗಪಡಿಸುವುದಾಗಿ ಹೇಳಿದ್ದೆ ಎಂದು ಆಕೆ ತಿಳಿಸಿದ್ದಾರೆ.    

- Advertisement -