ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 35 ರನ್‌ಗಳಿಂದ ಜಯ

Prasthutha|

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 35 ರನ್‌ಗಳಿಂದ ಜಯ ಸಾಧಿಸಿದೆ.

- Advertisement -

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್ ಸಿಬಿ7 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಕೊಹ್ಲಿ 51(43 ಎಸೆತ )ರನ್ ಗಳಿಸಿದರೆ, ನಾಯಕ ಡು ಪ್ಲೆಸಿಸ್ 25(12 ಎಸೆತ) ಗಳಿಸಿದರು. ವಿಲ್ ಜಾಕ್ಸ್ ಎರಡಂಕಿನದಾಟದೇ (6) ಔಟಾದರು. ರಜತ್ ಪಾಟಿದಾರ್ ಅಮೋಘ ಆಟವಾಡಿ, 20 ಎಸೆತಗಳಲ್ಲಿ 50 ರನ್ ಗಳಿಸಿದರು. 2 ಬೌಂಡರಿ ಮತ್ತು 5 ಸಿಕ್ಸರ್ ಅವರ ಬ್ಯಾಟಿಂಗ್‌ನಲ್ಲಿ ಇತ್ತು. ಲೊಮ್ರೋರ್ 7, ಕಾರ್ತಿಕ್11, ಸ್ವಪ್ನಿಲ್ ಸಿಂಗ್12 ರನ್ ಗಳಿಸಿ ಔಟಾದರು.ಕ್ಯಾಮರೂನ್ ಗ್ರೀನ್ 20 ಎಸೆತದಲ್ಲಿ 37 ರನ್ ಗಳಿಸಿ ಔಟಾಗದೆ ಉಳಿದರು.

ಜಯದೇವ್ ಉನದ್ಕತ್ 3 ವಿಕೆಟ್, ನಟರಾಜನ್ 2 ವಿಕೆಟ್ ಹಾಗೂ ಮಾರ್ಕಂಡೆ ಮತ್ತು ಕಮ್ಮಿನ್ಸ್ ತಲಾ ಒಂದು ವಿಕೆಟ್ ಪಡೆದರು.

- Advertisement -

ನಂತರ ಬ್ಯಾಟಿಂಗ್ ಮಾಡಿದ ಹೈದರಾಬಾದ್ ಟ್ರಾವಿಸ್ ಹೆಡ್ ಆರಂಭದಲ್ಲೇ ನಿರಾಸೆ ಮೂಡಿಸಿ1 ರನ್ ಗಳಿಸಿ ಔಟಾದರು. ಆದರೆ ಅಭಿಷೇಕ್ ಶರ್ಮ ಅಬ್ಬರಿಸುತ್ತಾ 31 ರನ್(13 ಎಸೆತ) ಗಳಿಸಿ ಔಟಾದರು.7 ರನ್ ಗಳಿಸಿದ್ದ ಮಾರ್ಕ್ರಾಮ್ ಅವರನ್ನು ಸ್ವಪ್ನಿಲ್ ಸಿಂಗ್ ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ನಿತೀಶ್ ರೆಡ್ಡಿ 13 ರನ್ ಗಳಿಸಿ ಔಟಾದರು. ಹೆನ್ರಿಚ್ ಕ್ಲಾಸೆನ್ 7, ನಾಯಕ ಪ್ಯಾಟ್ ಕಮ್ಮಿನ್ಸ್ 31(15 ಎಸೆತ), ಭುವನೇಶ್ವರ್ ಕುಮಾರ್ 13 ರನ್ ಗಳಿಸಿ ನಿರ್ಗಮಿಸಿದರು. ಶಹಬಾಝ್ ಅಹಮದ್ ಔಟಾಗದೆ 40, ಉನದ್ಕತ್ 8 ರನ್ ಗಳಿಸಿದ್ದು, ತಂಡಕ್ಕೆ 8 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಕರ್ಣ್ ಶರ್ಮ, ಸ್ವಪ್ನಿಲ್ ಸಿಂಗ್, ಗ್ರೀನ್ ತಲಾ 2 ವಿಕಟ್ ಪಡೆದರೆ, ಯಶ್ ದಯಾಳ್ 1 ವಿಕೆಟ್ ಕಿತ್ತುಕೊಂಡರು.

Join Whatsapp