ಮತಗಟ್ಟೆಗೆ ಫೋನ್ ಕೊಂಡೊಯ್ಯುವಂತಿಲ್ಲ: ಚುನಾವಣಾ ಆಯೋಗ

Prasthutha|

ಬೆಂಗಳೂರು: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಮತಗಟ್ಟೆಗಳಿಗೆ ಮತದಾರರು ಮೊಬೈಲ್ ಫೋನ್‌ಗಳನ್ನು ತೆಗೆದುಕೊಂಡು ಹೋಗದಂತೆ ಮತದಾರರಿಗೆ ಚುನಾವಣಾ ಆಯೋಗ ಆದೇಶಿಸಿದೆ.

- Advertisement -

ಆಯೋಗದ ಆದೇಶದಂತೆ, ಮತದಾರರು ಯಾವುದೇ ಮೊಬೈಲ್ ಫೋನ್‌ಗಳನ್ನು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಮತಗಟ್ಟೆಯ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ. ವೈರ್‌ಲೆಸ್ ಉಪಕರಣಗಳನ್ನು ಕೊಂಡೊಯ್ಯುವಂತಿಲ್ಲ. ಆದರೆ, ಮತಗಟ್ಟೆಗಳಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಗಳಿಗೆ ಮಾತ್ರ ಮೊಬೈಲ್ ಫೋನ್ ತೆಗೆದುಕೊಂಡು ಹೋಗಲು ಅವಕಾಶ ಇರುತ್ತದೆ.

ಮತದಾರರು ಮತದಾನ ಚೀಟಿ ಅಲ್ಲದೆ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇವೆಲ್ಲವೂ ಇದ್ದರೆ ಉತ್ತಮ. ನಿಮ್ಮ ಮತದಾನ ಚೀಟಿಯಲ್ಲಿ ವ್ಯತ್ಯಾಸ ಅಥವಾ ಸಮಸ್ಯೆಗಳು ಕಂಡು ಬಂದರೆ ಈ ದಾಖಲೆಗಳು ನಿಮಗೆ ಬೇಕಾಗಾಬಹುದು. ಆದರೆ ಇದರ ಯಾವುದೇ ದಾಖಲೆಗಳ ಫೋಟೋ ಅಥವಾ ಸ್ಕ್ರೀನ್ ಶಾಟ್ ಇಟ್ಟುಕೊಂಡು ಮತಗಟ್ಟೆಯ ಒಳಗೆ ಹೋಗುವಂತಿಲ್ಲ ಎಂಬುದನ್ನು ಮರೆಯಬಾರದು.

- Advertisement -


Join Whatsapp