ದೆಹಲಿ ರೈತರ ಪ್ರತಿಭಟನೆಯಿಂದ ಭಾರತೀಯ ಅಮೆರಿಕನ್ನರ ಮೇಲೆ ಪರಿಣಾಮ ಬೀರುತ್ತಿದೆ : ಏಳು ಅಮೆರಿಕ ಸಂಸದರಿಂದ ಪತ್ರ

Prasthutha|

ವಾಷಿಂಗ್ಟನ್ : ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ಭಾರತ ಸರಕಾರದೊಂದಿಗೆ ಮಾತನಾಡುವಂತೆ, ಭಾರತೀಯ ಅಮೆರಿಕನ್ ಸಂಸದೆ ಪ್ರಮೀಳಾ ಜಯಪಾಲ್ ಸೇರಿದಂತೆ ಅಮೆರಿಕದ ಏಳು ಮಂದಿ ಪ್ರಭಾವಿ ಸಂಸದರು ವಿದೇಶಾಂಗ ಸಚಿವ ಮೈಕ್ ಪೊಂಪ್ಯೊ ಅವರಿಗೆ ಪತ್ರ ಬರೆದಿದ್ದಾರೆ.

- Advertisement -

ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿ ವಿರುದ್ಧ ರೈತರ ಪ್ರತಿಭಟನೆಯಿಂದಾಗಿ ಭಾರತೀಯ ಅಮೆರಿಕನ್ನರ ಮೇಲೂ ಪ್ರಭಾವ ಬೀರಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

“ಇದು ಪಂಜಾಬ್ ಗೆ ಸಂಬಂಧಿಸಿದ, ಸಿಖ್ ಅಮೆರಿಕನ್ನರಿಗೆ ನಿರ್ದಿಷ್ಟವಾದ ಸಮಸ್ಯೆಯಾಗಿದೆ. ಆದರೂ ಇದು ಭಾರತದ ಇತರ ರಾಜ್ಯಗಳಿಗೂ ಸೇರಿದಂತೆ ಭಾರತೀಯ ಅಮೆರಿಕನ್ನರ ಮೇಲೂ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

- Advertisement -

ಅನೇಕ ಭಾರತೀಯ ಅಮೆರಿಕನ್ನರು ಪಂಜಾಬ್ ನಲ್ಲಿ ತಮ್ಮ ಕುಟುಂಬ ಸದಸ್ಯರು ಹಾಗೂ ಪೂರ್ವಜರ ಭೂಮಿ ಹೊಂದಿರುವುದರಿಂದ ಬಾರತದಲ್ಲಿ ಅವರ ಕುಟುಂಬಗಳ ಯೋಗಕ್ಷೇಮದ ಬಗ್ಗೆ ಕಾಳಜಿವಹಿಸಿರುವುದರಿಂದ ಇದು ನೇರವಾಗಿ ಪರಿಣಾಮ ಬೀರಿದೆ. ಈ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತದ ವಿದೇಶಾಂಗ ಕಾರ್ಯದರ್ಶಿಯನ್ನು ಸಂಪರ್ಕಿಸುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತೇವೆ ಎಂದು ಪತ್ರದಲ್ಲಿ ಬರೆಯಲಾಗಿದೆ.  

ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿ ವಿರೋಧಿಸಿ ದೆಹಲಿ ಗಡಿ ಭಾಗಗಳಲ್ಲಿ ರೈತರು ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.     

Join Whatsapp