ಉಡುಪಿ | ಚಿರತೆ ದಾಳಿ: ಸಾವಿನ ದವಡೆಯಿಂದ ಪಾರಾದ ನಾಯಿ !

Prasthutha|

ಉಡುಪಿ: ಚಿರತೆ ದಾಳಿಗೆ ಸಿಲುಕಿದ್ದ ನಾಯಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಉಡುಪಿ ಜಿಲ್ಲೆಯ ಹರ್ಗ ಗ್ರಾಮದ ಗೋಳಿಕಟ್ಟೆಯಲ್ಲಿ ನಡೆದಿದೆ.


ಹೆರ್ಗ ಗ್ರಾಮದ ಗೋಳಿಕಟ್ಟೆಯ ಬಾಲಚಂದ್ರ ಕೆದಿಲಾಯ ಎಂಬುವರ ಮನೆಯ ನಾಯಿಯನ್ನು ಚಿರತೆಯ ಕಚ್ಚಿ ಹಿಡಿದು ಎಳೆದೊಯ್ಯಲು ಯತ್ನಿಸಿದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ದಾಳಿ ವೇಳೆ ಕೆಲಕಾಲ ನಾಯಿ ಸತ್ತಂತೆ ಬಿದ್ದುಕೊಂಡಿತ್ತು. ಅದೇ ಸಮಯಕ್ಕೆ ಎಚ್ಚರಗೊಂಡ ಮಾಲೀಕರು ಮನೆಯ ಲೈಟ್ ಆನ್ ಮಾಡಿದ್ದಾರೆ. ಆಗ ಹೆದರಿದ ಚಿರತೆ ನಾಯಿಯನ್ನು ಹಾಗೆಯೇ ಬಿಟ್ಟು ಸ್ಥಳದಿಂದ ಪರಾರಿಯಾಗಿದೆ.

- Advertisement -

ನಾಯಿಯ ಕುತ್ತಿಗೆ ಭಾಗಕ್ಕೆ ಗಾಯಗಳಾಗಿದ್ದು, ಸಾವಿನ ದವಡೆಯಿಂದ ಪಾರಾಗಿದೆ. ನಾಯಿ ಮಾಲೀಕ ಬಾಲಚಂದ್ರ .ಕೆ ಆರೈಕೆ ಮಾಡುತ್ತಿದ್ದಾರೆ.

ಚಿರತೆ ದಾಳಿ ಮಾಡಿದ ವೀಡಿಯೋ

- Advertisement -