ಕುದ್ರೋಳಿ ದೇವಸ್ಥಾನದಲ್ಲಿ 900 ಕೆಜಿ ದವಸ-ಧಾನ್ಯದಿಂದ ತಿರಂಗಾ ವಿನ್ಯಾಸ

Prasthutha|

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸುಮಾರು 900 ಕೆಜಿ ದವಸ ಧಾನ್ಯಗಳಿಂದ ಕ್ಷೇತ್ರದ ಅಂಗಣದಲ್ಲಿ ಬೃಹತ್ ತಿರಂಗಾವನ್ನು ಭಾನುವಾರ ವಿನ್ಯಾಸಗೊಳಿಸಲಾಯಿತು.


900 ಕೆಜಿ ಧಾನ್ಯ, 100 ಕೆಜಿ ತರಕಾರಿ, 38 ಅಡಿ ವೃತ್ತ, 54 ಕಳಶ, 108 ಬಾಲೆಎಲೆ, 500 ವೀಳ್ಯದೆಲೆ ,100 ಕೆಜಿ ಬೆಳ್ತಿಗೆ ಅಕ್ಕಿಯನ್ನು ತಿರಂಗಾಕ್ಕೆ ಬಳಸಲಾಗಿದೆ.

- Advertisement -


ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ಗುರು ಬೆಳದಿಂಗಳು ಅಧ್ಯಕ್ಷ ಪದ್ಮರಾಜ್ ಆರ್., ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಮೊಂತೇರೋ ಮುಂತಾದವರು ಉಪಸ್ಥಿತರಿದ್ದರು.

- Advertisement -