ಜೈಪುರ: ಸಾವಿನಲ್ಲೂ ಒಂದಾದ ಅವಳಿ ಸಹೋದರರು!

Prasthutha|

ಜೈಪುರ : 900 ಕಿ.ಮೀ. ಅಂತರದಲ್ಲಿದ್ದ 26 ವರ್ಷದ ಅವಳಿ ಸಹೋದರರು ಒಂದೇ ದಿನದಲ್ಲಿ ಮೃತಪಟ್ಟ ದಾರುಣ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ.

- Advertisement -

ಸಾರ್ನಾಕೋ ತಲಾ ಎನ್ನುವ ಗ್ರಾಮದವರಾದ ಸಮರ್ ಹಾಗೂ ಸೋಹನ್ ಸಿಂಗ್ ಎಂಬ ಅವಳಿ ಸಹೋದರರಾಗಿದ್ದಾರೆ. ಸಮರ್ ಗುಜರಾತ್ನ ಜವಳಿ ಮಳಿಗೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಮೊಬೈಲ್ನಲ್ಲಿ ಮಾತನಾಡುವ ವೇಳೆ ಕಟ್ಟಡದಿಮದ ಜಾರಿ ಬಿದ್ದು ಮೃತಪಟ್ಟಿದ್ದಾನೆ.

ಶಿಕ್ಷಕ ವೃತ್ತಿಯ ಪರೀಕ್ಷೆಗಾಗಿ ಜೈಪುರದಲ್ಲಿ ಸಿದ್ಧತೆ ನಡೆಸುತ್ತಿದ್ದ ಸೋಹನ್, ಸಹೋದರನ ಸಾವಿನ ಸುದ್ದಿ ಕೇಳಿ ತನ್ನ ಮನೆಗೆ ಹಿಂದಿರುಗುವ ವೇಳೆ ನೀರಿನ ಟ್ಯಾಂಕ್ಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

- Advertisement -

ಸಮರ್ ಸಾವು ಆಕಸ್ಮಿಕವಾಗಿದ್ದು, ಸೋಹನ್ ಆತ್ಮಹತ್ಯೆಗೈದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Join Whatsapp