ಪಪುವಾ ನ್ಯೂಗಿನಿಯಲ್ಲಿ ಭಾರಿ ಭೂಕುಸಿತ: 670 ದಾಟಿದ ಮೃತರ ಸಂಖ್ಯೆ

Prasthutha|

ಮೆಲ್ಬರ್ನ್‌: ಪಪುವಾ ನ್ಯೂಗಿನಿಯಲ್ಲಿ ಕಂಡು ಕೇಳರಿಯದ, ಭಾರಿ ಪ್ರಮಾಣದ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 670 ದಾಟಿದೆ.

- Advertisement -

ಭೂ ಕುಸಿತದಿಂದ ಅಂದಾಜು 150ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ವಲಸೆ ಸಂಸ್ಥೆಯ ಅಧಿಕಾರಿ ಅಕ್ಟೊಪ್ರಾಕ್‌ ತಿಳಿಸಿದ್ದಾರೆ.

670ಕ್ಕೂ ಹೆಚ್ಚು ಜನರ ದೇಹವು ಮಣ್ಣಿನಲ್ಲಿ ಹುದುಗಿ ಹೋಗಿದೆ ಎನ್ನಲಾಗುತ್ತಿದೆ. ಭೂಮಿ ಇನ್ನೂ ಜಾರುತ್ತಿರುವುದರಿಂದ ಅಪಾಯದ ಪರಿಸ್ಥಿತಿ ಮುಂದುವರಿದಿದೆ. ಹೀಗಾಗಿ ರಕ್ಷಣಾ ಕಾರ್ಯಕ್ಕೂ ತೊಡಕಾಗಿದೆ. ಭಾನುವಾರದ ವೇಳೆಗೆ ಕೇವಲ ಆರು ದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -

ಬದುಕುಳಿದಿರುವವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ. ಭೂಕುಸಿತದಿಂದ ಉಂಟಾಗಿರುವ ಅವಘಡಗಳು ಮತ್ತು ಬುಡಕಟ್ಟು ಜನರ ನಡುವಿನ ಘರ್ಷಣೆ ಸಹ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿ ಪರಿಣಮಿಸಿದೆ. ದಕ್ಷಿಣ ಪೆಸಿಫಿಕ್‌ ದ್ವೀಪ ರಾಷ್ಟ್ರವು ನೆರವಿಗಾಗಿ ಅಂತಾರಾಷ್ಟ್ರೀಯ ಬೆಂಬಲ ಪಡೆಯುವ ನಿಟ್ಟಿನಲ್ಲಿ ಯೋಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Join Whatsapp