ಯುಟ್ಯೂಬರ್ ಧೃವ್ ರಾಠಿ ವಿರುದ್ಧ ಕಿಡಿಗಾರಿದ ಆಪ್ ಸಂಸದೆ ಸ್ವಾತಿ ಮಲಿವಾಲ್

Prasthutha|

ನವದೆಹಲಿ: ತನ್ನದೇ ಆಮ್ ಆದ್ಮಿ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಇಂದು ಖ್ಯಾತ ಯುಟ್ಯೂಬರ್ ಧೃವ್ ರಾಠಿ ವಿರುದ್ಧ ಕಿಡಿಗಾರಿದ್ದಾರೆ.

- Advertisement -

ಯುಟ್ಯೂಬರ್ ಧೃವ ರಾಠಿ ಒನ್‌ಸೈಡ್ ವಿಡಿಯೋ ಮಾಡಿದ್ದು, ಆ ಕಾರಣ ನನಗೆ ಬೆದರಿಕೆಗಳ ಸಂಖ್ಯೆ ಹೆಚ್ಚಾಗಿದೆ. ನನ್ನ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ನನ್ನ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಂತ್ರಸ್ತೆಯನ್ನೇ ಅವಮಾನಿಸುವ ಕೆಲಸ ಮಾಡಲಾಗುತ್ತಿದ್ದು, ನನ್ನ ಭಾವನೆ ಮತ್ತು ಗೌರವಕ್ಕೆ ಧಕ್ಕೆಯನ್ನುಂಟು ಮಾಡುವ ಕೆಲಸ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಧೃವ ರಾಠಿಯ ಎರಡು ನಿಮಿಷದ ವಿಡಿಯೋ ಬೆದರಿಕೆ ಅಂತಹ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿದೆ ಎಂದ ಸ್ವಾತಿ ಮಲಿವಾಲ, ಸಾಮಾಜಿಕ ಜಾಲತಾಣದ ಮೂಲಕ ಬಂದಿರುವ ಬೆದರಿಕೆ ಸಂದೇಶಗಳ ಸ್ಕ್ರೀನ್‌ಶಾಟ್ ಫೋಟೋಗಳನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಧೃವ್ ರಾಠಿ ವಿಡಿಯೋಗೆ ಅಸಮಾಧಾನ ಹೊರಹಾಕಿರುವ ಸ್ವಾತಿ ಮಲಿವಾಲ, ತಾವು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದ್ರೆ ಧೃವ್ ರಾಠಿ ನನ್ನ ಕರೆಗಳನ್ನು ಸ್ವೀಕರಿಸಿಲ್ಲ ಮತ್ತು ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದಿದ್ದಾರೆ.

Join Whatsapp