ದಮಾಮ್‌ನಲ್ಲಿ ಬೆಂಕಿ ಅವಘಡ: ಮೂಡಬಿದಿರೆಯ ಮಗು ಮೃತ್ಯು

Prasthutha|

ದಮಾಮ್:‌ ಸೌದಿ ಅರೇಬಿಯಾದ ದಮಾಮ್‌ನಲ್ಲಿ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮೂಡಬಿದಿರೆ ಮಗುವೊಂದು ಮೃತಪಟ್ಟು, ಮಗುವಿನ ತಂದೆ ತಾಯಿ, ಅಣ್ಣ ಐಸುಯುನಲ್ಲಿ ಚಿಕಿತ್ಸೆಯಲ್ಲಿದ್ದಾರೆ.

- Advertisement -

ಕಳೆದ ರಾತ್ರಿ ನಡೆದ ಘಟನೆಯಲ್ಲಿ ಫಹದ್‌ ಮತ್ತು ಅವರ ಪತ್ನಿ ಸಲ್ಮಾ, ಮಗ ಶಾಹಿದ್ ಶೇಖ್ ಗಂಭೀರವಾಗಿ ಗಾಯಗೊಂಡಿದ್ದು, ದಂಪತಿಯ ಇನ್ನೋರ್ವ ಮಗು ಸಾಯಿಕ್ ಶೇಖ್ ಮೃತಪಟ್ಟಿದೆ.

ಅದಮಾದ ಲುಲು ಮಾಲ್ ಹಿಂಭಾಗದಲ್ಲಿರುವ ಅಲ್ ಹುಸೇನಿ ಕಾಂಪೌಂಡ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಮೂಡಬಿದಿರೆಯ ಕೋಟೆಬಾಗಿಲು ಮೂಲದ ಶೇಖ್‌ ಫಹದ್‌ ಕುಟುಂಬ ಸಮೇತ ಕಟ್ಟಡದಲ್ಲಿ ಆರು ತಿಂಗಳಿನಿಂದವಾಸಿಸುತ್ತಿದ್ದರು.

Join Whatsapp