ಚಾಂಪಿಯನ್ KKR: ಮೂರನೇ ಬಾರಿ IPL ಕಿರೀಟ

Prasthutha|

ಫೈನಲ್‌ನಲ್ಲಿ ಹೈದರಾಬಾದ್ ಕಳಪೆ ಪ್ರದರ್ಶನ

- Advertisement -

ಚೆನ್ನೈ: ಕೋಲ್ಕತ್ತಾ ನೈಟ್​ ರೈಡರ್ಸ್ ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್​​​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಶ್ರೇಯಸ್ ಅಯ್ಯರ್​ ತನ್ನ ನಾಯಕತ್ವದಲ್ಲಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದರು.

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅತ್ಯಮೋಘ ಬೌಲಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಜಯ ಸಾಧಿಸಿ ಟ್ರೋಫಿ ತನ್ನದಾಗಿಸಿದೆ.

- Advertisement -

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಬೌಲರ್‌ಗಳು ತುಂಬಾನೇ ಕಾಡಿದರು.

ಮೊದಲ ಓವರ್‌ನಲ್ಲೇ 2 ರನ್ ಗಳಿಸಿದ್ದ ಅಭಿಷೇಕ್ ಶರ್ಮ ವಿಕೆಟ್ ಮಿಚೆಲ್ ಸ್ಟಾರ್ಕ್ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಕಿತ್ತರು. ಇನ್ನೊಂದು ಓವರ್ ನಲ್ಲಿ ಹೆಡ್ ಶೂನ್ಯಕ್ಕೆ ನಿರ್ಗಮಿಸಿದರು. ತಂಡ ಭಾರೀ ಆಘಾತಕ್ಕೆ ಸಿಲುಕಿತು.

ಆರಂಭಿಕ ಆಘಾತದ ಬಳಿಕ ಕೆಕೆಆರ್ ಬೌಲರ್ ಗಳು ಕೇಕೆ ಹಾಕುತ್ತಲೇ ಸಾಗಿದರು. ಹೈದರಾಬಾದ್ ಬ್ಯಾಟ್ಸ್ ಮ್ಯಾನ್ ಮಂಕಾದರು. ಹೆಚ್ಚು ಹೊತ್ತು ನಿಲ್ಲಲಿಲ್ಲ.ರಾಹುಲ್ ತ್ರಿಪಾಠಿ 9, ನಿತೀಶ್ ರೆಡ್ಡಿ 13, ಐಡೆನ್ ಮಾರ್ಕ್ರಾಮ್ 20 , ಶಹಬಾಝ್ ಅಹ್ಮದ್ 8, ಅಬ್ದುಲ್ ಸಮದ್ 4, ಹೆನ್ರಿಚ್ ಕ್ಲಾಸೆನ್ 16, ಜಯದೇವ್ ಉನದ್ಕತ್ 4 ರನ್ ಗಳಿಸಿ ಔಟಾದರು.

ಕೊನೆಯಲ್ಲಿ ನಾಯಕ ಪ್ಯಾಟ್ ಕಮ್ಮಿನ್ಸ್ ನೂರು ದಾಟಲು ನೆರವಾದರು. 24 ರನ್ ಗಳಿಸಿ ಕ್ಯಾಚಿತ್ತು ನಿರ್ಗಮಿಸಿದರು.

ಕೊನೆಗೆ 18.3 ಓವರ್‌ಗಳಲ್ಲಿ ಐಪಿಎಲ್ ಫೈನಲ್ ಇತಿಹಾಸದಲ್ಲೇ ಅತ್ಯಂತ ಕಳಪೆ ಮೊತ್ತಕ್ಕೆ ಸನ್ ರೈಸರ್ಸ್ ಆಲೌಟಾಗಿ ಕೆಕೆಆರ್ ಗೆಲುವಿಗೆ 114 ರನ್ ಗಳ ಸಣ್ಣ ಗುರಿ ಮುಂದಿಟ್ಟಿತು.

ಕೆಕೆಆರ್‌ನ ಆಂಡ್ರೆ ರಸೆಲ್3 ವಿಕೆಟ್ , ಮಿಚೆಲ್ ಸ್ಟಾರ್ಕ್ 2 ವಿಕೆಟ್ , ಹರ್ಷಿತ್ ರಾಣಾ 2 ವಿಕೆಟ್, ವರುಣ್ ಚಕ್ರವರ್ತಿ ಮತ್ತು ವೈಭವ್ ಅರೋರಾ ಒಂದೊಂದು ವಿಕೆಟ್ ಕಿತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಮಾರಕವಾಗಿ ಪರಿಣಮಿಸಿದರು.

ಸುಲಭ ಗುರಿ ಬೆನ್ನು ಹತ್ತಿದ ಕೆಕೆಆರ್ ಸುನಿಲ್ ನಾರಾಯಣ್ ವಿಕೆಟ್ ಕಳೆದುಕೊಂಡರೂ, ಸ್ಫೋಟಕ ಆಟವಾಡಿದ ವೆಂಕಟೇಶ್ ಅಯ್ಯರ್ ಕೇಲವ 26 ಎಸೆತದಲ್ಲಿ ಅರ್ಧ ಶತಕ 52 ರನ್ ಸಿಡಿಸಿದರು. ನಾಯಕ ಶ್ರೇಯಸ್ ಅಯ್ಯರ್ ಗೆಲುವಿನ ದಡ ಸುಲಭದಲ್ಲಿ ತಲುಪಿಸಿದರು. ತಂಡ ಕೇವಲ 10.3 ಓವರ್ ಗಳಲ್ಲಿ 114 ರನ್ ಗಳಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.

ಐಪಿಎಲ್ ಇತಿಹಾಸದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಚಾಂಪಿಯನ್ ಆಗಿರುವ ಮೂರನೇ ತಂಡ ಹೆಗ್ಗಳಿಕೆಗೆ ಕೆಕೆಆರ್ ಪಾತ್ರವಾಗಿದೆ. ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಲಾ 5 ಬಾರಿ ಟ್ರೋಫಿ ಗೆದ್ದು ಮೊದಲ ಎರಡು ಸ್ಥಾನ ಪಡೆದಿವೆ.

Join Whatsapp