ನಿಯಮ ಉಲ್ಲಂಘಿಸಿ ಹನುಮಾನ್ ಚಾಲೀಸಾ ಪಠಿಸಿದ ಶ್ರೀ ರಾಮ ಸೇನಾ ಕಾರ್ಯಕರ್ತರು ಅರೆಸ್ಟ್

Prasthutha|

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ನಿಯಮ ಉಲ್ಲಂಘಿಸಿ ಆಂಜನೇಯ ದೇವಾಲಯದಲ್ಲಿ ಹನುಮಾನ್ ಚಾಲೀಸಾ ಪಠಿಸಿ ಶಬ್ಧ ಮಾಲಿನ್ಯ ಮಾಡಿದ ಆರೋಪದಲ್ಲಿ ಶ್ರೀ ರಾಮ ಸೇನೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಆಝಾನ್ ವಿರೋಧಿಸಿ ರಾಮಸೇನೆ ಕಾರ್ಯಕರ್ತರು ಇಂದು “ಸುಪ್ರಭಾತ ಅಭಿಯಾನ”ಕ್ಕೆ ಚಾಲನೆ ನೀಡಿ, ಹನುಮಾನ್ ಚಾಲೀಸ ಹಾಡಿದ್ದರು, ಶಬ್ಧ ಮಾಲಿನ್ಯ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -


ಆಝಾನ್’ನಿಂದ ನಮಗೆ ತೊಂದರೆಯಾಗುತ್ತಿದೆ, ಸರ್ಕಾರ ಕೂಡಲೇ ಆಝಾನ್’ಗೆ ನಿರ್ಬಂಧ ಹೇರುವಂತೆ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದರು. ಇಲ್ಲದಿದ್ದರೆ ಶ್ರೀರಾಮ ಸೇನೆ ನಾಡಿನ ಎಲ್ಲಾ ದೇವಾಲಯಗಳಲ್ಲೂ ಆಝಾನ್‌ಗೆ ವಿರುದ್ಧವಾಗಿ ಹನುಮಾನ್ ಚಾಲೀಸಾ ಪಠಿಸುವ ಬೆದರಿಕೆಯನ್ನೂ ಒಡ್ಡಿದ್ದರು. ಅದರಂತೆ ಇಂದು ಕಾರ್ಯಕರ್ತರು ಬೆಳಕು ಹರಿಯುವ ಮುನ್ನವೇ ನಿಯಮ ಉಲ್ಲಂಘಿಸಿ 4.50 ಕ್ಕೆ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ ಪಠಿಸಿದ್ದಾರೆ.


ಧ್ವನಿವರ್ಧಕ ಹನುಮಾನ್ ಚಾಲೀಸಾ ಹಾಡಿರುವುದು ಶಬ್ಧ ಮಾಲಿನ್ಯ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದ್ದು ಉದ್ದ ಆಂಜನೇಯ ದೇವಾಲಯದಲ್ಲಿ ಚಾಲೀಸ ಪಠಿಸಿದ ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

Join Whatsapp