ಪುತ್ತೂರು: KSRTC ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಅರ್ಚಕ ಸುಬ್ರಹ್ಮಣ್ಯ ಭಟ್ ಬಂಧನ

Prasthutha|

ಪುತ್ತೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಅರ್ಚಕ ಸುಬ್ರಹ್ಮಣ್ಯ ಭಟ್ ನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

 ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕದ ಮುರ ಗ್ರಾಮದ ಬಳಿ ಗುರುವಾರ(ಜೂ.22) 20 ವರ್ಷದ ಯುವತಿಯೊಬ್ಬಳು ಕೆಎ 17 ಎಫ್ 1293 ನೋಂದಣಿ ಸಂಖ್ಯೆಯ ಉಪ್ಪಳ-ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತನ್ನ ತಾಯಿಯೊಂದಿಗೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪುತ್ತೂರಿಗೆ ಪ್ರಯಾಣಿಸುತ್ತಿದ್ದಳು. ಈ ವೇಳೆ ಯುವತಿಯ ಹಿಂದೆ ಕುಳಿತಿದ್ದ ಅರ್ಚಕ ಸುಬ್ರಹ್ಮಣ್ಯ ಭಟ್ ತನ್ನನ್ನು ಮುಟ್ಟಿದ್ದಾಗಿ ಯುವತಿ ದೂರು ನೀಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಅರ್ಚಕ ತನ್ನ ಕೈಗಳನ್ನು ಸೀಟ್​ಗಳ ನಡುವೆ ಇಟ್ಟು ಯುವತಿಯ ಸೊಂಟದ ಕೆಳಗೆ ಮುಟ್ಟಿದ್ದಾನೆ. ಯುವತಿ ಬೊಬ್ಬೆ ಹಾಕಿದಾಗ ಆತ ಪುತ್ತೂರಿನ ಬೊಳ್ವಾರ ಬಳಿ ಬಸ್​ನಿಂದ ಇಳಿದು ಹೋಗಿದ್ದನು.

- Advertisement -

ನಂತರ ಗುರುವಾರ ಸಂಜೆ 5.30ರ ಸುಮಾರಿಗೆ ಮಹಿಳೆ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಗೆ ಬಂದು ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಈ ಕುರಿತು ದಕ್ಷಿಣ ಕನ್ನಡ ಪೊಲೀಸರು ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.