ಮೂವರು ಹೆಣ್ಣು ಮಕ್ಕಳ ಜೊತೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

Prasthutha|

ಚಿಕ್ಕೋಡಿ: ಮಹಿಳೆಯೊಬ್ಬರು ತನ್ನ ಮೂವರು ಹೆಣ್ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಹಾರಾಷ್ಟ್ರದ ಜತ್ತ ತಾಲೂಕಿನ ಬಿಳ್ಳೂರು ಗ್ರಾಮದಲ್ಲಿ ನಡೆದಿದೆ. ನಾಲ್ವರ ಶವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದೆ.

- Advertisement -

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಸುನಿತಾ ತುಕಾರಾಮ್ ಮಾಳಿ ಮತ್ತು ಪುತ್ರಿಯರಾದ ಅಮೃತಾ, ಅಂಕಿತಾ ಹಾಗೂ ಐಶ್ವರ್ಯಾ ಅವರ ಮೃತದೇಹಗಳು ಕೆರೆಯಲ್ಲಿ ಪತ್ತೆಯಾಗಿವೆ.

ಕಳೆದ ಅ.9ರಂದು ಮುಂಜಾನೆ ಈ ಕುಟುಂಬ ಮನೆ ಬಿಟ್ಟು ತೆರಳಿತ್ತು.

- Advertisement -

ಸುನಿತಾ ಅವರನ್ನು ಮಹಾರಾಷ್ಟ್ರದ ಬಿಳ್ಳೂರು ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿದ್ದು, ಅವರಿಗೆ ಮೂವರೂ ಹೆಣ್ಮಕ್ಕಳಿದ್ದಾರೆ. ಅಲ್ಲಿ ಸಂಸಾರ ಹೇಗೆ ನಡೆಯುತ್ತಿತ್ತು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಆಕೆ ಒಮ್ಮಿಂದೊಮ್ಮೆಗೇ ನಾಪತ್ತೆಯಾಗಿ ಶವವಾಗಿ ಪತ್ತೆಯಾಗಿರುವುದರಿಂದ ಕೌಟುಂಬಿಕ ಸಮಸ್ಯೆಗಳೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ.

  ಮಹಾರಾಷ್ಟ್ರದ ಜತ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp