ಹಿಜಾಬ್ ಧರಿಸಿಕೊಂಡು ಪ್ರತ್ಯೇಕತೆ ಬಯಸುವವರು ಪಾಕಿಸ್ಥಾನಕ್ಕೆ ಹೋಗಲಿ: ಮುತಾಲಿಕ್

Prasthutha|

ಹುಬ್ಬಳ್ಳಿ: ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವ ಉಡುಪಿ ಸರಕಾರಿ ಬಾಲಕಿಯರ ಕಾಲೇಜಿನ ಹಿಜಾಬ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭಾರತದಲ್ಲಿಯೇ ಇದ್ದು ಪ್ರತ್ಯೇಕತೆ ಬಯಸುವವರನ್ನು ಪಾಕಿಸ್ತಾನ ಅಥವಾ ಅಫ್ಗಾನಿಸ್ತಾನಕ್ಕೆ ಕಳುಹಿಸಬೇಕು ಎಂದು ಹೇಳಿದ್ದಾರೆ.

- Advertisement -

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹಿಜಾಬ್‌ ಧರಿಸುವ ಅಗತ್ಯವಿಲ್ಲ. ಇದರ ಬಗ್ಗೆ ಚರ್ಚೆಯೂ ಅನಗತ್ಯ. ಈಗ ಹಿಜಾಬ್‌ ಧರಿಸಲು ಅನುಮತಿ ಕೊಡುವಂತೆ ಕೋರುವವರು ಮುಂದೆ ಶೈಕ್ಷಣಿಕ ಕೇಂದ್ರಗಳಲ್ಲಿಯೇ ಬುರ್ಖಾ ಹಾಕಲು ಅವಕಾಶ ಕೊಡಿ. ಅಲ್ಲಿಯೇ ನಮಾಜ್‌ ಮಾಡುತ್ತೇವೆ ಎನ್ನುತ್ತಾರೆ. ಮುಸ್ಲಿಮರು ವೈಯಕ್ತಿಕ ಸ್ವಾತಂತ್ರ್ಯವನ್ನು ಮನೆಯಲ್ಲಿ ಆಚರಿಸಿಕೊಳ್ಳಬೇಕು. ಹಿಜಾಬ್‌ ಕಳಚಲು ವಿರೋಧಿಸುವ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜುಗಳ ಆಡಳಿತ ಮಂಡಳಿಯವರು ವರ್ಗಾವಣೆ ಪ್ರಮಾಣಪತ್ರ (ಟಿ.ಸಿ.) ಕೊಟ್ಟು ಕಳುಹಿಸಬೇಕು’ ಎಂದರು.‌

ಇನ್ನು ‘ಕೆಲ ಉರ್ದು ಶಾಲೆಗಳಲ್ಲಿ ಭಾನುವಾರದ ಬದಲು ಶುಕ್ರವಾರ ರಜೆ ಕೊಡಲಾಗುತ್ತಿದೆ. ಇದನ್ನು ಯಾರೂ ಒಪ್ಪುವುದಿಲ್ಲ. ರಾಜ್ಯ ಸರ್ಕಾರ ದೇಶದ ಸುರಕ್ಷತೆಗಾಗಿ ಮುಸ್ಲಿಮರನ್ನು ಹದ್ದು ಬಸ್ತಿನಲ್ಲಿಡಬೇಕು. ಹಿಜಾಬ್‌ ವಿಷಯದಲ್ಲಿ ಸರ್ಕಾರ ದೃಢ ನಿಲುವು ತಾಳಬೇಕು ಎಂದ್ದಿದ್ದಾರೆ.

Join Whatsapp