ರಾಜ್ಯಸಭಾ ಉಪಚುನಾವಣೆಗೆ ಜವಾಹರ್ ಸರ್ಕಾರ್ ರನ್ನು ಕಣಕ್ಕಿಳಿಸಿದ ತೃಣಮೂಲ ಕಾಂಗ್ರೆಸ್

Prasthutha|

ಕೋಲ್ಕತಾ: ರಾಜ್ಯದಲ್ಲಿ ಮುಂಬರುವ ರಾಜ್ಯಸಭಾ ಉಪಚುನಾವಣೆಯಲ್ಲಿ ಮಾಜಿ ಅಧಿಕಾರಿ ಜವಾಹರ್ ಸರ್ಕಾರ್ ಅವರನ್ನು ಅಭ್ಯರ್ಥಿಯಾಗಿ ತೃಣಮೂಲ ಕಾಂಗ್ರೆಸ್ ಶನಿವಾರ ಪ್ರಕಟಿಸಿದೆ.

- Advertisement -

ಈ ವರ್ಷದ ಆರಂಭದಲ್ಲಿ ದಿನೇಶ್ ತ್ರಿವೇದಿ ಅವರ ನಿರ್ಗಮನದಿಂದ ತೆರವಾಗಿದ್ದ ಸ್ಥಾನಕ್ಕೆ ರಾಜ್ಯಸಭಾ ಉಪಚುನಾವಣೆಯು ಆಗಸ್ಟ್ 9 ರಂದು ನಡೆಯಲಿದೆಯೆಂದು ಚುನಾವಣಾ ಅಯೋಗ ಜುಲೈ 16 ರಂದು ತಿಳಿಸಿತ್ತು. ಸಂಸತ್ತಿನ ಮೇಲ್ಮನೆಗೆ ನಡೆಯುವ ಚುನಾವಣೆಗೆ ಜವಾಹರ್ ಸರ್ಕಾರ್ ಅವರನ್ನು ನಾಮನಿರ್ದೇಶನ ಮಾಡಲು ನಮಗೆ ಸಂತೋಷವಾಗುತ್ತಿದೆ ತೃಣಮೂಲ ಕಾಂಗ್ರೆಸ್ ಪಕ್ಷ ತಿಳಿಸಿದೆ.

ಸರ್ಕಾರ್ ಅವರು ಸುಮಾರು 42 ವರ್ಷಗಳ ಕಾಲ ಸಾರ್ವಜನಿಕ ಸೇವೆಯಲ್ಲಿ ಕಳೆದಿದ್ದು, ಪ್ರಸಾರ ಭಾರತಿಯ ಮಾಜಿ ಸಿಇಒ ಆಗಿದ್ದಾರೆ ಎಂದು ರಾಜ್ಯದ ಆಡಳಿತ ಪಕ್ಷ ಟಿ.ಎಂ.ಸಿ ತಿಳಿಸಿದೆ. ಸಾರ್ವಜನಿಕ ಸೇವೆಯಲ್ಲಿ ಜವಾಹರ್ ಸರ್ಕಾರ್ ಅವರ ಕೊಡುಗೆಯು ದೇಶಕ್ಕೆ ಇನ್ನಷ್ಟು ಅಗತ್ಯತೆಯನ್ನು ಪೂರೈಸಲಿದೆಯೆಂದು ಟಿ.ಎಂ.ಸಿ ಹೇಳಿದೆ.

- Advertisement -

ನಾಮನಿರ್ದೇಶನದ ಕುರಿತು ಪ್ರತಿಕ್ರಿಯಿಸಿದ ಸಿರ್ಕರ್ ಅವರು ಈ ಹಿಂದೆ ಅಧಿಕಾರಿಯಾಗಿದ್ದ ನಾನು ಪರಿಣಿತ ರಾಜಕಾರಣಿಯಲ್ಲ. ಆದರೇ ಸಂಸತ್ತಿನಲ್ಲಿ ಜನಸಾಮಾನ್ಯರಿಗೆ ಸಂಬಂದಿಸಿದ ವಿಷಯಗಳ ಕುರಿತು ದ್ವನಿಯೆತ್ತುವ ಮೂಲಕ ಜನರ ಅಭಿವೃದ್ಧಿಗೆ ಶ್ರಮಿಸುತ್ತೇನೆಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಪ್ರತಿಪಕ್ಷ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಹೋದಲ್ಲಿ ಪಶ್ಚಿಮ ಬಂಗಾಳದಿಂದ ರಾಜ್ಯಸಭಾ ಸ್ಥಾನಕ್ಕೆ ಟಿಎಂಸಿ ಪಕ್ಷದ ಅಭ್ಯರ್ಥಿಯು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ನಿಚಳವಾಗಿದೆ.

Join Whatsapp