ಜೆರುಸಲೇಂ : ಫೆಲೆಸ್ತೀನಿಯನ್ನರ ಮನೆ, ಅಂಗಡಿಗಳ ಮೇಲೆ ಇಸ್ರೇಲಿ ಪಡೆಗಳ ದಾಳಿ; ಹಲವರಿಗೆ ಗಾಯ

Prasthutha|

ಜೆರುಸಲೇಂ : ಇಸ್ರೇಲಿ ಆಕ್ರಮಣಕಾರಿ ಪಡೆಗಳು ಇಂದು ಮುಂಜಾನೆ ಹಲವಾರು ಫೆಲೆಸ್ತೀನಿಯನ್ನರ ಮನೆಗಳು ಮತ್ತು ಅಂಗಡಿಗಳ ಮೇಲೆ ದಾಳಿ ಮಾಡಿರುವ ಮತ್ತು ಹಲವು ಮಂದಿಯನ್ನು ಗಾಯಗೊಳಿಸಿದ ಬಗ್ಗೆ ವರದಿಗಳಾಗಿವೆ. ಆಕ್ರಮಿತ ಜೆರುಸಲೇಂನ ಸಿಲ್ವಾನ್‌ ಭಾಗವಾದ ಅಲ್‌ ಬುಸ್ತಾನ್‌ ನಲ್ಲಿ ಈ ಘಟನೆ ನಡೆದಿದೆ. ಫೆಲೆಸ್ತೀನಿಯನ್ನರಿಗೆ ಸೇರಿದ ಆಸ್ತಿಗಳನ್ನು ಧ್ವಂಸ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

- Advertisement -

ನಿದಾಲ್‌ ಅಲ್-ರಜಬಿ ಮಾಲಕತ್ವದ ಅಂಗಡಿ ಧ್ವಂಸದ ವೇಳೆ ಇಸ್ರೇಲ್‌ ದಾಳಿಗಳನ್ನು ತಡೆಯುವ ಯತ್ನವಾಗಿ ಫೆಲೆಸ್ತೀನಿಯನ್‌ ಪ್ರತಿಭಟನಕಾರರು ಬೀದಿಗಿಳಿದರು.

ಇಸ್ರೇಲಿ ಆಕ್ರಮಣಕಾರಿ ಪಡೆಗಳು ಫೆಲೆಸ್ತೀನಿಯನ್ನರ ಮೇಲೆ ಸ್ಟೀಲ್‌ ಲೇಪಿತ ರಬ್ಬರ್‌ ಬುಲೆಟ್‌ ಗಳು, ಅಶ್ರುವಾಯುಗಳನ್ನು ಸಿಡಿಸಿ ದಾಳಿ ಮಾಡಿದ್ದಾರೆ. ಹಲವು ಮಂದಿಗೆ ಗಾಯಗಳಾಗಿವೆ ಮತ್ತು ಅಶ್ರುವಾಯುವಿನಿಂದ ಸಮಸ್ಯೆಗಳಾಗಿವೆ. ದಾಳಿಯಲ್ಲಿ ಕನಿಷ್ಠ ಹದಿಮೂರು ಮಂದಿ ಗಾಯಗೊಂಡಿದ್ದಾರೆ ಎಂದು ಜೆರುಸಲೇಂನಲ್ಲಿ ರೆಡ್‌ ಕ್ರೆಸೆಂಟ್‌ ದೃಢಪಡಿಸಿದೆ.

- Advertisement -

ಮುಂಜಾನೆಯೇ ಪ್ರದೇಶವನ್ನು ಸೀಲ್‌ ಡೌನ್ ಮಾಡಲಾಗಿತ್ತು.  ಪತ್ರಕರ್ತರಿಗೂ ಪ್ರವೇಶ ನಿರಾಕರಿಸಲಾಗಿತ್ತು. ಜನರು ಕಟ್ಟಡದೊಳಗೆ ಪ್ರವೇಶಿಸುವುದನ್ನು ತಡೆಯಲಾಗಿತ್ತು ಮತ್ತು ಕಟ್ಟಡ ಧ್ವಂಸ ಮಾಡುವ ಬೆದರಿಕೆಯೊಡ್ಡಲಾಗಿತ್ತು ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.  

Join Whatsapp