ಅಮೆರಿಕದ ಮಾಡೆರ್ನಾ ಕೋವಿಡ್ ಲಸಿಕೆ ಆಮದಿಗೆ ಸಿಪ್ಲಾಗೆ ಅನುಮತಿ; ಶೀಘ್ರದಲ್ಲೇ ಫೈಝರ್‌ ಕೂಡ ಭಾರತಕ್ಕೆ

Prasthutha|

ನವದೆಹಲಿ : ಭಾರತದಲ್ಲಿ ಕೋವಿಡ್‌ ತಡೆಗೆ ತುರ್ತು ಬಳಕೆಗಾಗಿ ಅಮೆರಿಕ ಮೂಲದ ಮಾಡೆರ್ನಾ ಸಂಸ್ಥೆಯ ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಸಿಪ್ಲಾ ಕಂಪೆನಿಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದೆ. ಅಲ್ಲದೆ, ಈ ಬಗ್ಗೆ ಕೋವಿಡ್‌ ಟಾಸ್ಕ್‌ ಫೋರ್ಸ್‌ ನ ಮುಖ್ಯಸ್ಥ ವಿ.ಕೆ. ಪೌಲ್‌ ಕೂಡ ದೃಢಪಡಿಸಿದ್ದಾರೆ.

- Advertisement -

ಅಮೆರಿಕ ಮೂಲದ ಮಾಡೆರ್ನಾ ಕಂಪೆನಿಯ ಕೋವಿಡ್‌ ಲಸಿಕೆಗಳನ್ನು ಭಾರತದಲ್ಲಿ ಷರತ್ತುಬದ್ಧವಾಗಿ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಮಾಡೆರ್ನಾ ಭಾರತದಲ್ಲಿ ಕೋವಿಡ್‌ ತಡೆಗೆ ಬಳಕೆಯಾಗುತ್ತಿರುವ ನಾಲ್ಕನೇ ಲಸಿಕೆಯಾಗಲಿದೆ ಎಂದು ವಿ.ಕೆ. ಪೌಲ್‌ ಹೇಳಿದ್ದಾರೆ.

ಸದ್ಯಕ್ಕೆ ಭಾರತದಲ್ಲಿ ಕೋವ್ಯಾಕ್ಸಿನ್‌, ಕೋವಿಶೀಲ್ಡ್‌, ಸ್ಪುಟ್ನಿಕ್‌ ವಿ ಮತ್ತು ಮಾಡೆರ್ನಾ ಲಸಿಕೆಗಳನ್ನು ಬಳಸಲು ಅನುಮತಿ ನೀಡಲಾಗಿದೆ. ಶೀಘ್ರದಲ್ಲೇ ಫೈಝರ್‌ ಲಸಿಕೆ ಆಮದು ಮಾಡಿಕೊಳ್ಳುವ ಕುರಿತ ಮಾತುಕತೆ ಪೂರ್ಣಗೊಳ್ಳಲಿದೆ ಎಂದೂ ಅವರು ಹೇಳಿದ್ದಾರೆ.    

Join Whatsapp