ಪ್ರಯಾಣಿಕನ ಮೊಬೈಲ್ ಗೆ ಬೆಂಕಿ, ಇಂಡಿಗೋ ವಿಮಾನದಲ್ಲಿ ಆತಂಕ !

Prasthutha|

ನವದೆಹಲಿ: ದಿಬ್ರುಗಢ ಮತ್ತು ದೆಹಲಿ ನಡುವೆ ಸಂಚರಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್‌ ಫೋನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಪರಿಕರವನ್ನು ಬಳಸಿ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿದ್ದಾರೆ.

- Advertisement -

ದೆಹಲಿಗೆ ಬರುತ್ತಿದ್ದ 6ಇ 2037 ವಿಮಾನದಲ್ಲಿ ಈ ಘಟನೆ ನಡೆದಿದ್ದು, ಯಾರಿಗೂ ತೊಂದರೆಯಾಗಿಲ್ಲ. ವಿಮಾನವು ಸುರಕ್ಷಿತವಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ ಎಂದು ಡಿಜಿಸಿಎ ಹೇಳಿದ್ದಾರೆ.

Join Whatsapp