‘ದಿ ಕಾಶ್ಮೀರ್ ಫೈಲ್ಸ್’ ಬಳಿಕ ‘ದಿಲ್ಲಿ ಫೈಲ್ಸ್’ ಚಿತ್ರ ಘೋಷಿಸಿದ ವಿವೇಕ್ ಅಗ್ನಿಹೋತ್ರಿ !

Prasthutha|

ಮುಂಬೈ: ದೇಶಾದ್ಯಂತ ತೆರೆಕಂಡು ವಿವಾದ ಸೃಷ್ಟಿಸಿದ್ದ ‘ ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಳಿಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೊಸ ಚಿತ್ರದ ಘೋಷಣೆಯನ್ನು ಮಾಡಿದ್ದಾರೆ. 2020ರ ದೆಹಲಿ ಗಲಭೆಯ ಕುರಿತಾದ ‘ದಿಲ್ಲಿ ಫೈಲ್ಸ್’ ಚಿತ್ರ ನಿರ್ದೇಶಿಸುವುದಾಗಿ ಅಗ್ನಿಹೋತ್ರಿ ತಿಳಿಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ವಿವೇಕ್, ಮೊದಲನೇಯದಾಗಿ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಒಪ್ಪಿಕೊಂಡ ಎಲ್ಲರಿಗೂ ಧನ್ಯವಾದಗಳು, ಕಳೆದ 4 ವರ್ಷಗಳಿಂದ ನಾವು ಅತ್ಯಂತ ಕಠಿಣ ಮತ್ತು ಪ್ರಾಮಾಣಿಕತೆಯಿಂದ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ನಾನು ನಿಮ್ಮ ಟಿಎಲ್ ಅನ್ನು ಸ್ಪ್ಯಾಮ್ ಮಾಡಿರಬಹುದು ಆದರೆ ಕಾಶ್ಮೀರಿ ಹಿಂದೂಗಳಿಗೆ ಮಾಡಿದ ನರಮೇಧ ಮತ್ತು ಅನ್ಯಾಯದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಬಹಳ ಮುಖ್ಯ.ಇದೀಗ ಹೊಸ ಸಿನಿಮಾದ ಸಮಯ ಎಂದು ಬರೆದುಕೊಂಡಿದ್ದಾರೆ.

ಕಳೆದ ಮಾರ್ಚ್ 11ರಂದು ಬಿಡುಗಡೆಯಾಗಿದ್ದ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ವಿರುದ್ಧ ದೇಶಾದ್ಯಂತ ಆಕ್ರೋಶಗಳು ವ್ಯಕ್ತವಾಗಿದ್ದವು. ನಿರ್ದಿಷ್ಟ ಸಮುದಾಯವನ್ನು ಗುರಿಪಡಿಸಿ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ಸಿನಿಪ್ರಿಯರು ಆರೋಪಿಸಿದ್ದರು. ಅದಾಗ್ಯೂ ಹೊಸ ಫೈಲ್ಸ್ ಕುರಿತಾದ ಚಿತ್ರವನ್ನು ನಿರ್ದೇಶಿಸುವುದಾಗಿ ವಿವೇಕ್ ಘೋಷಿಸಿದ್ದಾರೆ.

Join Whatsapp