ಕೋಮುವಾದಿ ಶಕ್ತಿಗಳಿಂದ ಹೈದರಾಬಾದ್ ಚುನಾವಣೆಯ ವೇಳೆ ಗಲಭೆ ಸೃಷ್ಟಿಸುವ ಸಾಧ್ಯತೆ : ಡಿಜಿಪಿ

Prasthutha|

ಹೈದರಾಬಾದ್ : ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ವೇಳೆ ಗಲಭೆಗಳನ್ನು ನಡೆಸಲು ಕೋಮುವಾದಿ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ತೆಲಂಗಾಣ ಡಿಜಿಪಿ ಎಂ. ಮಹೇಂದರ್ ರೆಡ್ಡಿ ಹೇಳಿದ್ದಾರೆ.

ಹೈದರಾಬಾದ್ ನಲ್ಲಿ ಶಾಂತಿ ಕದಡುವ ಯೋಜನೆಯನ್ನು ಕೆಲವು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳು ಹೊಂದಿದ್ದಾರೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಸಮಾಜದ ಸಮುದಾಯಗಳ ನಡುವೆ, ದ್ವೇಷ ಮತ್ತು ಶತ್ರುತ್ವವನ್ನು ಹರಡಲು ಸಾಮಾಜಿಕ ಜಾಲತಾಣಗಳನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಅಂತಹ ಶಕ್ತಿಗಳ ಮೇಲೆ ಗಮನವಿರಿಸಲಾಗಿದೆ. ಒಂದು ವೇಳೆ ಮಾಹಿತಿ ಸ್ಪಷ್ಟವಾದಲ್ಲಿ, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ವಿವಿಧ ಪಕ್ಷಗಳ ಮುಖಂಡರ ಭಾಷಣಗಳು ಕೋಮುವಾದಿ ಭಾವನೆಯಿಂದ ತುಂಬಿವೆ ಎಂದು ಅವರು ತಿಳಿಸಿದ್ದಾರೆ. ಹೈದರಾಬಾದ್ ನಲ್ಲಿ ರೋಹಿಂಗ್ಯಾಗಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 62 ಅಂತಹ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ.

- Advertisement -