ಡಿಗೊ ಮರಡೋನ ನಿಧನ ಗೌರವಾರ್ಥವಾಗಿ ಕೇರಳದಲ್ಲಿ ಎರಡು ದಿನ ಶೋಕಾಚರಣೆ

Prasthutha|

ತಿರುವನಂತಪುರಂ : ಫುಟ್ಬಾಲ್ ದಂತಕತೆ ಡಿಗೊ ಮರಡೋನ ನಿಧನದ ಹಿನ್ನೆಲೆಯಲ್ಲಿ ಕೇರಳ ಸರಕಾರ ಎರಡು ದಿನಗಳ ಶೋಕಾಚರಣೆ ಘೋಷಿಸಿದೆ. ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ ಮರಡೋನ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ನಿರ್ಧಾರ ಪ್ರಕಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

- Advertisement -

ಹಿರಿಯ ಆಟಗಾರ ಮರಡೋನ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ನಿರ್ಧಾರ ಪ್ರಕಟಿಸಿದೆ. ಇದು ರಾಜ್ಯದ ಇತಿಹಾಸದಲ್ಲಿಯೇ ಅಪರೂಪದ ಗೌರವ ಸೂಚಕವಾಗಿದೆ. ಮರಡೋನ ಸಮಾಜವಾದಿಗಳ ಜೊತೆ ನಿಂತ ಅತ್ಯುತ್ತಮ ಕ್ರೀಡಾಪಟು ಎಂದು ಸಿಎಂ ಪಿಣರಾಯಿ ವಿಜಯನ್ ಸ್ಮರಿಸಿದ್ದಾರೆ.

ಕೇರಳ ಸೇರಿದಂತೆ ಜಗತ್ತಿನಾದ್ಯಂತ ಅಭಿಮಾನಿಗಳು ಮರಡೋನ ಸಾವಿನಿಂದ ತೀವ್ರ ನೊಂದಿದ್ದಾರೆ ಎಂದು ಮುಖ್ಯಮಂತ್ರಿಯವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Join Whatsapp