ಅಧಿಕಾರಿಗಳು ರಾಜಕಾರಣಿಗಳ ಚಪ್ಪಲಿ ಎತ್ತಿಕೊಳ್ಳುವವರು : ಬಿಜೆಪಿ ನಾಯಕಿ ಉಮಾ ಭಾರತಿ ವಿವಾದಾತ್ಮಕ ಹೇಳಿಕೆ

Prasthutha|

ಭೋಪಾಲ್: ಅಧಿಕಾರಿಗಳು ನಮ್ಮಂತಹ ರಾಜಕಾರಣಿಗಳ ಚಪ್ಪಲಿಗಳನ್ನು ಎತ್ತಿಕೊಳ್ಳುವವರು ಎಂದು ಹಿರಿಯ ಬಿಜೆಪಿ ನಾಯಕಿ ಹಾಗೂ ಮಾಜಿ ಮುಖ್ಯಮಂತ್ರಿ ಉಮಾ ಭಾರತಿಯವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯ ವೀಡಿಯೋ ವೈರಲ್ ಆಗುತ್ತಿದೆ. ಮಾಜಿ ಮುಖ್ಯಮಂತ್ರಿ ಇನ್ನೂ ಮುಂದುವರಿದು ನಾವು ಅವರನ್ನು ಆ ಕಾರ್ಯಕ್ಕಾಗಿ ಮಾತ್ರ ಅನುಮತಿ ನೀಡುತ್ತೇವೆ ಎಂದು ಹೇಳಿದ್ದಾರೆ.

- Advertisement -

ಅಧಿಕಾರಿ ವರ್ಗದ ಮನೋಸ್ಥೈರ್ಯವನ್ನು ದುರ್ಬಲಗೊಳಿಸುವ ವಿವಾದಾತ್ಮಕ ವೀಡಿಯೋದ ಕುರಿತು ನೆಟ್ಟಿಗರು ವ್ಯಾಪಕವಾದ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮಾಧ್ಯಮದ ಪ್ರತಿನಿಧಿಗಳು ಉಮಾ ಭಾರತಿಯನ್ನು ಸಂಪರ್ಕಿಸಿ, ಅಧಿಕಾರಿಗಳು ರಾಜಕಾರಣಿಗಳನ್ನು ನಿಯಂತ್ರಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಈ ಮೇಲಿನಂತೆ ಉತ್ತರಿಸಿದ ವೀಡಿಯೋ ಈಗ ವೈರಲ್ ಆಗುತ್ತಿದೆ.

ಅಧಿಕಾರಿಗಳ ವಿರುದ್ದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿಯ ಈ ರೀತಿಯ ಕೀಳು ಮಟ್ಟದ ಪ್ರತಿಕ್ರಿಯೆಗೆ ಕಾಂಗ್ರೆಸ್ ಖಾರವಾಗಿ ಪ್ರತ್ಯುತ್ತರ ನೀಡಿದ್ದು, ಅವರ ಹೇಳಿಕೆಯನ್ನು ಖಂಡಿಸಿದೆ. ಮಾತ್ರವಲ್ಲ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಹೇಳಿಕೆಯನ್ನು ಸಮರ್ಥಿಸುತ್ತಾರೆಯೇ ಎಂದು ಪ್ರಶ್ನಿಸಿದೆ.



Join Whatsapp