ಗಾಂಧಿ ಹತ್ಯೆಯನ್ನು ಬಹಿರಂಗವಾಗಿ ಒಪ್ಪಿಕೊಂಡ ಸಂಘಪರಿವಾರದ ನಾಯಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಸುಳ್ಯದಲ್ಲಿ SDPI ಪ್ರತಿಭಟನೆ

Prasthutha|

ಸುಳ್ಯ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ನಡೆಸಿದ್ದು ನಾವೇ ಎಂದು ಬಹಿರಂಗ ವಾಗಿ ಒಪ್ಪಿಕೊಂಡು ಸವಾಲೆಸೆದ ಹಿಂದೂ ಮಹಾಸಭಾ ನಾಯಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ SDPI ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಸುಳ್ಯ ಹಳೆ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದೆ.

- Advertisement -

ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಎಸ್ ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಮಾತನಾಡಿ ಭಾರತದ ಮೊದಲ ಭಯೋತ್ಪಾದಕ ಕೃತ್ಯವಾದ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹತ್ಯೆಯನ್ನು ಸಮರ್ಥಿಸಿ ಒಪ್ಪಿಕೊಂಡು ಇನ್ನೂ ಕೂಡ ಮುಂದುವರೆಸುತ್ತೇವೆ ಎಂದು ಹೇಳಿಕೆ ನೀಡಿದ ಇವರನ್ನು ಬಂಧಿಸಿದರೆ ಸಾಲದು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಮಾತ್ರವಲ್ಲದೆ ಈ ಹಿಂದೆ ನಡೆದ ಅನೇಕ ವಿಚಾರವಾದಿಗಳ ಹತ್ಯೆಯಲ್ಲೂ ಇವರ ಕೈವಾಡ ಇರುವ ಬಗ್ಗೆ ನಮಗೆ ಸಂಶಯವಿದೆ,ಈ ನಿಟ್ಟಿನಲ್ಲೂ ಪೋಲಿಸ್ ಇಲಾಖೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದರೆ ಪ್ರಶ್ನಿಸಿದವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವ ಪೋಲಿಸ್ ಇಲಾಖೆ ಗಾಂಧಿ ಹತ್ಯೆ ನಡೆಸಿದ್ದು ನಾವೇ ಎಂದು ಬಹಿರಂಗವಾಗಿ ಒಪ್ಪಿಕೊಂಡವರ ವಿರುದ್ಧ ಯಾಕೆ ದೇಶದ್ರೋಹದ ಪ್ರಕರಣ ದಾಖಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯಲ್ಲಿ ಎಸ್ ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಬಾಬು ಎನ್ ಸವಣೂರು, ಕಾರ್ಯದರ್ಶಿ ನಝೀರ್ ಸಿ.ಎ, ಸಮಿತಿ ಸದಸ್ಯರಾದ ಅಬ್ದುಲ್ ಕಲಾಂ ಸುಳ್ಯ ಸಿದ್ದೀಕ್ ಅಲೆಕ್ಕಾಡಿ,ಸಿದ್ದೀಕ್ ಕೋಡಿಯೆಮ್ಮೆ, ಸುಳ್ಯ ನಗರ ಕಾರ್ಯದರ್ಶಿ ಮೀರಝ್ ಸುಳ್ಯ, ಸವಣೂರು ಬ್ಲಾಕ್ ಸಮಿತಿ ಅಧ್ಯಕ್ಷರಾದ ರಫೀಕ್ ಎಂ.ಎ, ಕಾರ್ಯದರ್ಶಿ ಆಶ್ರಪ್ ಸವಣೂರು, ಸುಳ್ಯ ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾದ ಆಬಿದ್ ಪೈಚಾರ್, ಕಾರ್ಯದರ್ಶಿ ಫಾರೂಕ್ ಕಾನಕ್ಕೋಡ್, ಬೆಳ್ಳಾರೆ ಬ್ಲಾಕ್ ಅಧ್ಯಕ್ಷರಾದ ಹಮೀದ್ ಮರಕ್ಕಡ, ಕಾರ್ಯದರ್ಶಿ ಶಹೀದ್ ಬೆಳ್ಳಾರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Join Whatsapp