ಸಂಸತ್ ದಾಳಿಗೆ 19 ವರ್ಷ | ವೀರ ಹುತಾತ್ಮರ ಸ್ಮರಣೆ

Prasthutha|

ನವದೆಹಲಿ: 2001ರಲ್ಲಿ ನಡೆದ ಸಂಸತ್ತಿನ ಮೇಲಿನ ದಾಳಿಗೆ ಬರೋಬ್ಬರಿ 19 ವರ್ಷಗಳು ಸಂಪೂರ್ಣವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸೇರಿದಂತೆ ಗಣ್ಯರು ದಾಳಿಯ ಸಂದರ್ಭ ಹುತಾತ್ಮರಾದ ಯೋಧರನ್ನು ಸ್ಮರಿಸಿದ್ದಾರೆ.

- Advertisement -

2001ರ ಡಿಸೆಂಬರ್ 13ರಂದು ದೆಹಲಿಯ ಸಂಸತ್ತಿನ ಮೇಲೆ ಪಾಕ್ ಮೂಲದ ಉಗ್ರ ಸಂಘಟನೆ ಭೀಕರ ದಾಳಿ ನಡೆಸಿತ್ತು. ದಾಳಿಯಲ್ಲಿ 8 ಮಂದಿ ಭದ್ರತಾ ಪಡೆ ಸಿಬ್ಬಂದಿಗಳು ಸೇರಿ 9 ಮಂದಿ ಸಾವನ್ನಪ್ಪಿದ್ದರು. ದಾಳಿ ನಡೆಸಿದ ಎಲ್ಲಾ 5 ಉಗ್ರರನ್ನು ಭದ್ರತಾಪಡೆಗಳು ಗುಂಡಿಕ್ಕಿ ಕೊಂದಿದ್ದವು.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “2001ರಲ್ಲಿ ಸಂಸತ್ತಿನ ಮೇಲೆ ನಡೆದ ಹೇಡಿತನದ ದಾಳಿಯನ್ನು ನಾವು ಎಂದಿಗೂ ಮರೆಯುವುದಿಲ್ಲ. ನಮ್ಮ ಸಂಸತ್ತನ್ನು ರಕ್ಷಿಸುವ ಸಲುವಾಗಿ ಪ್ರಾಣ ಕಳೆದುಕೊಂಡವರ ಶೌರ್ಯ ಮತ್ತು ತ್ಯಾಗವನ್ನು ನಾವು ನೆನೆಯುತ್ತಿದ್ದೇವೆ. ಭಾರತ ಸದಾ ಅವರಿಗೆ ಕೃತಜ್ಞವಾಗಿ ಇರಲಿದೆ” ಎಂದು ಹೇಳಿದ್ದಾರೆ.

- Advertisement -

“ಸಂಸತ್ತಿನ ಮೇಲೆ ದಾಳಿ ನಡೆದಾಗ ಕೆಚ್ಚೆದೆಯಿಂದ ಹೋರಾಡಿ ಜೀವ ಅರ್ಪಿಸಿದ ವೀರ ಹುತಾತ್ಮರ ನೆನಪು ಸದಾ ಅಮರ. ಅವರ ತ್ಯಾಗವನ್ನು ದೇಶ ಸ್ಮರಿಸುತ್ತದೆ” ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹೇಳಿದ್ದಾರೆ.

Join Whatsapp