ಮದುವೆ ಮನೆಯ ಚಪ್ಪರಕ್ಕೆ ಹೊತ್ತಿದ ಬೆಂಕಿ: ನವ ದಂಪತಿ ಸೇರಿ 6 ಮಂದಿ ಸಾವು

Prasthutha|

ಮದುವೆ ಮನೆಯ ಚಪ್ಪರಕ್ಕೆ ಬೆಂಕಿ ಹೊತ್ತಿಕೊಂಡು ಆರು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.

- Advertisement -

ನರೇಶ್ ಪಾಸ್ವಾನ್ ಅವರ ಮಗಳ ಮದುವೆ ಇತ್ತು ಹಾಗಾಗಿ ಬೇರೆ ಊರಿನಿಂದ ಮದುವೆಗೆ ಬಂದವರನ್ನು ಸ್ವಾಗತಿಸಲು ಸಿದ್ಧತೆ ನಡೆಸಲಾಗಿತ್ತು.

ಮೃತರಲ್ಲಿ ದಂಪತಿ, ಓರ್ವ ಮಹಿಳೆ ಹಾಗೂ ಮೂವರು ಮಕ್ಕಳು ಸೇರಿದ್ದಾರೆ.

- Advertisement -

ದಂಪತಿ ಬಂದ ತಕ್ಷಣ ಪಟಾಕಿ ಸಿಡಿಸಿದ್ದಾರೆ, ಆಗ ಟೆಂಟ್ ಗೆ ಬೆಂಕಿ ಹೊತ್ತಿಕೊಂಡಿತ್ತು. ಜನರು ಬಂದು ಬೆಂಕಿ ನಂದಿಸಲು ಶುರುಮಾಡಿದಾಗ ಅಲ್ಲಿದ್ದ ಸಿಲಿಂಡರ್ ಗೂ ಬೆಂಕಿ ಹೊತ್ತಿಕೊಂಡಿತ್ತು. ಅಲ್ಲಿಂದ ಡೀಸೆಲ್ ಸ್ಟಾಕ್ ಗೂ ಬೆಂಕಿ ತಗುಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರೆಲ್ಲಾ ಒಂದೇ ಕುಟುಂಬದವರು ಎನ್ನಲಾಗಿದೆ.

Join Whatsapp