ದೇಶದ ಅರ್ಧದಷ್ಟು ಮಂದಿ ಹಸಿಯುತ್ತಿರುವಾಗ ಹೊಸ ಸಂಸತ್ ಭವನವೇಕೆ?: ಕಮಲ್ ಹಾಸನ್

Prasthutha|

ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರ ಹೊಸ ಸಂಸತ್ ಭವನ ನಿರ್ಮಾಣ ಯೋಜನೆಯನ್ನು ತಮಿಳು ನಟ ಕಮಲ್ ಹಾಸನ್ ತೀವ್ರವಾಗಿ ಟೀಕಿಸಿದ್ದಾರೆ. ನರೇಂದ್ರ ಮೋದಿ ಇತ್ತೀಚೆಗಷ್ಟೇ ಸಂಸತ್ ಕಟ್ಟಡದ ಶಿಲಾನ್ಯಾಸವನ್ನು ನಡೆಸಿದ್ದರು. 2021ರ ತಮಿಳುನಾಡು ವಿಧಾನಸಭಾ ಚುನಾವಣೆಯ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡುವ ಕೆಲವು ಗಂಟೆಗಳ ಮುಂಚೆ ಕಮಲ್ ಹಾಸನ್ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ.

- Advertisement -

“ಕೊರೋನಾ ವೈರಸ್ ನಿಂದಾಗಿ ದೇಶದ ಅರ್ಧದಷ್ಟು ಮಂದಿ ಹಸಿವೆಯಲ್ಲಿರುವಾಗ, ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುತ್ತಿರುವಾಗ 1000 ಕೋಟಿ ರೂಪಾಯಿಗಳ ಹೊಸ ಸಂಸತ್ತು ಬೇಕೆ? ಚೀನಾದ ಗೋಡೆಯನ್ನು ನಿರ್ಮಿಸುತ್ತಿರುವಂತೆ ಸಾವಿರಾರು ಮಂದಿ ಸತ್ತಾಗ ಜನರ ರಕ್ಷಣೆಗಾಗಿ ಇದರ ಅಗತ್ಯವಿದೆ ಎಂದಿದ್ದರು. ಯಾರನ್ನು ರಕ್ಷಿಸುವುದಕ್ಕಾಗಿ ನೀವು 1000 ಕೋಟಿ ರೂಪಾಯಿಯ ಸಂಸತ್ತನ್ನು ಕಟ್ಟುತ್ತಿದ್ದೀರಿ? ದಯವಿಟ್ಟು ಉತ್ತರಿಸಿ ನನ್ನ ಗೌರವಾನ್ವಿತ ಚುನಾಯಿತ ಪ್ರಧಾನಿಗಳೇ?” ಎಂದು ಹಾಸನ್ ಶನಿವಾರ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ 20000 ಕೋಟಿ ರೂಪಾಯಿ ಸೆಂಟ್ರಲ್ ವಿಸ್ತಾ ನವೀಕರಣ ಯೋಜನೆಯ ಕೇಂದ್ರ ಬಿಂದುವಾಗಿರುವ ಹೊಸ ಸಂಸತ್ ಭವನದ ಶಿಲಾನ್ಯಾಸವನ್ನು ನರೇಂದ್ರ ಮೋದಿಯವರು ಡಿ.10ರಂದು ನೆರವೇರಿಸಿದ್ದರು.

Join Whatsapp