ನೀವು ಗೂಂಡಾಗಳನ್ನು ಗೌರವಿಸುವವರು: ಬಿಜೆಪಿ ವಿರುದ್ಧ ಆಪ್ ಕಿಡಿ

Prasthutha|

ನವದೆಹಲಿ: ಜಹಾಂಗೀರ್ ಪುರಿಯಲ್ಲಿ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ (ಎಎಪಿ) ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ವಲಸಿಗರನ್ನು ಅಕ್ರಮವಾಗಿ ವಾಸಿಸಲು ಎಎಪಿ ಸರ್ಕಾರ ಸಹಾಯ ಮಾಡಿದ ಪರಿಣಾಮವಾಗಿ ಏಪ್ರಿಲ್ 16 ರ ಘರ್ಷಣೆ ಸಂಭವಿಸಿದೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಆರೋಪಿಸಿದ್ದರು.

- Advertisement -

ಇದಕ್ಕೆ ಪ್ರತಿಕ್ರಿಸಿದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷ ಬಿಜೆಪಿಗರು ಗೂಂಡಾಗಳನ್ನು ಗೌರವಿಸುವವರು ಎಂದು ಚಾಟಿ ಬೀಸಿದೆ.

ಗುಪ್ತಾ ಮತ್ತು ಇತರ ಬಿಜೆಪಿ ನಾಯಕರು ಕೇಜ್ರಿವಾಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಆರೋಪಿಗಳನ್ನು ಸನ್ಮಾನಿಸಿದ್ದರು ಮತ್ತು ಶನಿವಾರ ಜಹಾಂಗೀರ್ಪುರಿಯಲ್ಲಿ ನಡೆದ ಹನುಮಾನ್ ಜಯಂತಿ ಮೆರವಣಿಗೆ ವೇಳೆ ಎರಡು ಕೋಮುಗಳು ಘರ್ಷಣೆಗೆ ಇಳಿದಿದ್ದು ಹಿಂಸಾಚಾರದಲ್ಲಿ ಎಂಟು ಪೊಲೀಸರು ಮತ್ತು ಒಬ್ಬ ನಾಗರಿಕ ಗಾಯಗೊಂಡಿದ್ದಾರೆ. ಈ ಸಂಬಂಧ ದೆಹಲಿ ಪೊಲೀಸರು ಇದುವರೆಗೆ 21 ಜನರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

“ಇತ್ತೀಚಿನ ಘಟನೆಗಳು ಹೇಗೆ ಹರಡಿವೆ ಎಂಬುದನ್ನು ನೋಡಿದರೆ, ಹಿಂಸಾಚಾರದ ಹಿಂದೆ ಬಿಜೆಪಿಯೇ ಇದೆ ಎಂಬುದು ಸ್ಪಷ್ಟವಾಗಿದೆ. ವಿಧ್ವಂಸಕತೆ ಮತ್ತು ಗೂಂಡಾಗಿರಿಗಾಗಿ ಬಂಧಿಸಲ್ಪಟ್ಟ 8 ಮಂದಿ ಗೂಂಡಾಗಳನ್ನು ಸ್ವತಃ ಆದೇಶ್ ಗುಪ್ತಾ ಸನ್ಮಾನಿಸಿದ್ದರು. ಅಂತಹ ಗೂಂಡಾಗಳನ್ನು ನೀವು ಗೌರವಿಸಿದಾಗ ನೀವು ಹಿಂಸಾಚಾರದ ಪರವಾಗಿದ್ದೀರಿ ಎಂಬ ಸಂದೇಶವನ್ನು ಜನಸಾಮಾನ್ಯರಿಗೆ ರವಾನಿಸುತ್ತೀರಿ” ಎಂದು ಎಎಪಿ ಹೇಳಿಕೆಯಲ್ಲಿ ತಿಳಿಸಿದೆ.

Join Whatsapp