ಪಣಂಬೂರು ರಿಕ್ಷಾ ಚಾಲಕನ ಮೇಲೆ ಹಲ್ಲೆ ಪ್ರಕರಣ: ದುರ್ಬಲ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲು ಆರೋಪ

Prasthutha|

ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ SDTU

- Advertisement -

ಮಂಗಳೂರು: SDTU ಮಂಗಳೂರು ದಕ್ಷಿಣ ಏರಿಯಾ ಸಮಿತಿ ವತಿಯಿಂದ ರಿಕ್ಷಾ ಚಾಲಕರು ಒಟ್ಟು ಸೇರಿ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಶುಕ್ರವಾರ ನಡೆದಿದೆ

ರಿಕ್ಷಾ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿ ಪಣಂಬೂರು ಬೀಚ್ ರಿಕ್ಷಾ ಪಾರ್ಕ್‌ನಲ್ಲಿ ರಿಕ್ಷಾ ಚಾಲಕ ಆರಫಾತ್‌ರವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಪೊಲೀಸರು ದಾಖಲಿಸಿದ ಪ್ರಕರಣ ದುರ್ಬಲ ಸೆಕ್ಷನ್‌ಗಳ ಅಡಿಯಲ್ಲಾಗಿದೆ. ಸ್ಟೇಷನ್ ನಲ್ಲಿಯೇ ಮಂಜೂರಾಗುವ ಈ ದುರ್ಬಲ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಿದರೆ ಇಲ್ಲಿನ ಗೂಂಡಾಗಿರಿ ಇನ್ನೂ ಮುಂದುವರಿಯುತ್ತದೆ. ಹಾಗಾಗಿ ಆರೋಪಿಗಳು ಸ್ಪಾನರ್‌ನಿಂದ ತಲೆಗೆ ಮತ್ತು ಚೂಪಾದ ವಸ್ತುವಿನಿಂದ ಕೈಗೆ ಇರಿದು ಹಲ್ಲೆ ನಡೆಸಿದ್ದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಮುತ್ತಿಗೆ ಹಾಕಲಾಗಿದೆ.

- Advertisement -

ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ಗೌಡ, ಘಟನೆಯ ಬಗ್ಗೆ ಹಲ್ಲೆಗೊಳಗಾದ ಅರಫಾತ್‌ರ ಹೇಳಿಕೆ ಪ್ರಕಾರ ಪ್ರಕರಣ ದಾಖಲಿಸಿದ್ದೇವೆ. ಕಾನೂನಿನ ಪ್ರಕ್ರಿಯೆ ಮುಂದುವರಿಯುತ್ತದೆ. ಇದರಲ್ಲಿ ಅಸಮಾಧಾನ ಇದ್ದರೆ ತನಿಖೆ ನಡೆಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

SDTU ಮಂಗಳೂರು ದಕ್ಷಿಣ ಏರಿಯಾ ಅಧ್ಯಕ್ಷ ಇಕ್ಬಾಲ್ ಬೂಟ್ ಪ್ಯಾಲೇಸ್, ಕಾರ್ಯದರ್ಶಿ ಅನ್ಸಾರ್ ಕುದ್ರೋಳಿ, ಮಂಗಳೂರು ರಿಕ್ಷಾ ಚಾಲಕ ಮಾಲಕ ಸಂಘದ ಪ್ರಧಾನ ಕಾರ್ಯದರ್ಶಿ ಭಾರತ್, SDTU ಏರಿಯಾ ಸಮಿತಿ ಉಪಾಧ್ಯಕ್ಷ ಮುಸ್ತಫಾ ಪಾರ್ಲಿಯಾ, ಸಹ ಕಾರ್ಯದರ್ಶಿ ಶರೀಫ್ ಕುತ್ತಾರ್, ಆಟೋ ಯೂನಿಯನ್ ಮಂಗಳೂರು ನಗರ ಸಮಿತಿ ಅಧ್ಯಕ್ಷ ಇಲ್ಯಾಸ್ ಬೆಂಗರೆ, ಕಾರ್ಯದರ್ಶಿ ಫಿರೋಝ್ ಪಡುಬಿದ್ರೆ, ಇರ್ಫಾನ್ ಕಾನ, ಸುರತ್ಕಲ್ ಏರಿಯಾ ಅಧ್ಯಕ್ಷ ಕಬೀರ್ ಸುರತ್ಕಲ್, ಆಶಿಕ್ ಚೊಕ್ಕಬೆಟ್ಟು, ಶೌಕತ್ ಚೊಕ್ಕಬೆಟ್ಟು ಮತ್ತಿತರ ರಿಕ್ಷಾ ಚಾಲಕರು ಧರಣಿಯಲ್ಲಿ ಭಾಗವಹಿಸಿದರು

Join Whatsapp