ಶಾಸಕನ ಪತ್ನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ !

Prasthutha|

ಮುಂಬೈ:  ಶಿವಸೇನೆ ಶಾಸಕರೊಬ್ಬರ ಪತ್ನಿ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಭಾನುವಾರ ರಾತ್ರಿ ಕುರ್ಲಾ ಉಪನಗರದಲ್ಲಿ ನಡೆದಿದೆ.

- Advertisement -

ಶಿವಸೇನಾ ಶಾಸಕ ಮಂಗೇಶ್ ಕುಡಾಳ್ಕರ್ ಅವರ ಪತ್ನಿಯಾದ ರಜನಿ ಕುಡಾಳ್ಕರ್ ಅವರ ಮೃತದೇಹ ನೆಹರು ನಗರದ ಡಿಗ್ನಿಟಿ ಕೋಆಪರೇಟಿವ್ ಸೊಸೈಟಿ ಫ್ಲಾಟ್‌ ನಲ್ಲಿ ರಾತ್ರಿ 8.30ರ ಸುಮಾರಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಕಾರಣ ತಿಳಿದುಬಂದಿಲ್ಲ.

Join Whatsapp