” PFI ಮೇಲೆ ನಡೆಯುವಂಥ NIA ದಾಳಿಗಳು RSS/ ಭಜರಂಗ ದಳಗಳ ಮೇಲೆ ಏಕೆ ನಡೆಯುವುದಿಲ್ಲ?”

Prasthutha|

ಶಿವಸುಂದರ್

- Advertisement -

ನಿನ್ನೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ NIA ದೇಶಾದ್ಯಂತ PFI ಕಚೇರಿಗಳ ಮೇಲೆ ನಡೆಸಿ ನೂರಕ್ಕೂ ಹೆಚ್ಚು PFI ಪಧಾಧಿಕಾರಿಗಳನ್ನು ಬಂಧಿಸಿದ್ದಾರೆ. ಇದು PFI ಸಂಘಟನೆಯನ್ನು ನಿಷೇಧಿಸುವ ಕಡೆಗೆ ಕೇಂದ್ರ ಸರ್ಕಾರ ಇಡುತ್ತಿರುವ ಮತ್ತೊಂದು ಹೆಜ್ಜೆಯೂ ಆಗಿದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯ ಪಡುತ್ತಿದ್ದಾರೆ.


PFI ಮೇಲಿನ ದಾಳಿಯ ಬಗ್ಗೆ ನಿನ್ನೆ NIA ನೀಡಿರುವ ಸಬೂಬು ಇದು:
” ಇತರ ಧಾರ್ಮಿಕ ನಂಬಿಕೆಯ ಜನರನ್ನು ನಿರ್ದಯವಾಗಿ ಹತ್ಯೆ ಮಾಡುವುದು..
ಗಣ್ಯರನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಲು ಸ್ಪೋಟಕವನ್ನು ಸಂಗ್ರಹಿಸುವುದು…
ಸಾರ್ವಜನಿಕರ ಆಸ್ತಿಯನ್ನು ನಾಶ ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಭಯದ ಭಾವನೆ ಹುಟ್ಟುಹಾಕುವ……. ಕೆಲಸವನ್ನು PFI ಮಾಡಿತ್ತು “
PFI ಇಂತಹ ಕೆಲಸಗಳಲ್ಲಿ ತೊಡಗಿರುವುದಕ್ಕೆ ಸಾಕ್ಷ್ಯಾಧಾರಗಳು ಇದ್ದರೆ ಅದನ್ನು ಆಧರಿಸಿ ಕಾನೂನು ಕ್ರಮ ತೆಗೆದುಕೊಳ್ಳುವು ಸರ್ಕಾರದ ಕೆಲಸ.
ಹಾಗೆ ಆ ಸಾಕ್ಷ್ಯಗಳನ್ನು ಕೋರ್ಟಿನ ಮುಂದೆ ಹಾಜರು ಪಡಿಸಿ ಅವರ ಅಪರಾಧಗಳನ್ನು ರುಜುವಾತು ಮಾಡಿ ಶಿಕ್ಷೆ ಕೊಡಿಸುವುದೂ ತಪ್ಪಲ್ಲ.
ಆದರೆ PFI ಮೇಲಿನ ದಾಳಿಯ ಹಿಂದೆ ಬಿಜೆಪಿ ಸರ್ಕಾರದ ಉದ್ದೇಶ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಮಾತ್ರ ಆಗಿದೆಯೇ?.
ಏಕೆಂದರೆ PFI ಮೇಲೆ ಹೊರಿಸಲಾಗಿರುವ ಆರೋಪಗಳಿಗಿಂತ ಭೀಕರ ಸ್ವರೂಪದ ಅಪರಾಧಗಳನ್ನು- “ಸ್ಪೋಟಕ ಸಂಗ್ರಹ, ಹತ್ಯೆ, ಸಾಮೂಹಿಕ ನರಮೇಧ, ಪರಧರ್ಮೀಯರಲ್ಲಿ ಭೀತಿ” ಇತ್ಯಾದಿಗಳನ್ನು ಸಂಘಪರಿವಾರದ ಅಂಗಸಂಸ್ಥೆಗಳು ಮೋದಿ ಸರ್ಕಾರದಡಿಯಲ್ಲಿ ಇನ್ನೂ ಘೋರವಾಗಿ ನಡೆಸುತ್ತಿವೆ. ಆದರೆ ಅದರ ಮೇಲೆ NIA ದಾಳಿ ಮಾಡುವುದಿರಲಿ, ರಾಜ್ಯ ಪೊಲೀಸರೂ ಒಂದು ಸಾಮಾಜಿಕ ಕೇಸನ್ನೂ ದಾಖಲಿಸುತ್ತಿಲ್ಲ.

- Advertisement -


ಆದ್ದರಿಂದ….
ಪಕ್ಷಕ್ಕಿಂತ, ವ್ಯಕ್ತಿಗಿಂತ ..ದೇಶವೇ ಮುಖ್ಯವಾದ ನಿಜವಾದ ದೇಶಭಕ್ತರಿಗೆ ಈ ಪ್ರಶ್ನೆಗಳು ಸಹಜವಾಗಿ ಬಂದೇ ಬರಬೇಕು ..

  • ಮೊದಲನೆಯದಾಗಿ NIA ಹೊರಿಸಿರುವ ಆರೋಪಗಳೆಲ್ಲಾ IPC ಕಾಯಿದೆಯಡಿಗಳಲ್ಲಿ ಬರುವ ಅಪರಾಧಗಳು. ಸಾಮಾನ್ಯವಾಗಿ NIA ಗೆ UAPA, ದೇಶದ್ರೋಹದಡಿ ಬರುವ ಅಪರಾಧಗಳನ್ನು ವಹಿಸಲಾಗುತ್ತದೆ.
    ಹಾಗಿದ್ದರೆ PFI ವಿಷಯದಲ್ಲಿ ಮಾತ್ರ BJP ಸರ್ಕಾರ IPC ಅಪರಾಧಗಳಾಗಿರುವ ಈ ಪ್ರಕರಣಗಳನ್ನು NIA ಗೆ ವಹಿಸಿದ್ದೇಕೆ?
  • ಎರಡನೆಯದಾಗಿ PFI ಮೇಲಿನ ಆರೋಪ ” ಇತರ ಧಾರ್ಮಿಕ ನಂಬಿಕೆಯ ಜನರನ್ನು ನಿರ್ದಯವಾಗಿ ಹತ್ಯೆ ಮಾಡುವುದು
    ಇದು ಘೋರ ಅಪರಾಧ. ಯಾರೇ ಮಾಡಿದರೂ ಶಿಕ್ಷೆಯಾಗಬೇಕು.
    ಆದರೆ ಹಿಂದೂಗಳಲ್ಲದ ಮುಸ್ಲಿಮರು ಮತ್ತು ಕ್ರಿಸ್ಚಿಯನ್ನರನ್ನು….
    ಇತರ ಧರ್ಮೀಯರು ಎನ್ನುವ ಏಕೈಕ ಕಾರಣಕ್ಕೆ ಬೀದಿ ಬೀದಿಯಲ್ಲಿ ಕಗ್ಗೊಲೆ ಮಾಡಿರುವ / ಮಾಡುತ್ತಿರುವ / ಮಾಡಿದ ಆರೋಪ ಹೊತ್ತಿರುವ ಹಲವಾರು RSS-ಸಂಘಪರಿವಾರದ ಪದಾಧಿಕಾರಿಗಳನ್ನು / ಕಾರ್ಯಕರ್ತರನ್ನು ಬಿಜೆಪಿ ಸರ್ಕಾರ ಏಕೆ ಬಂಧಿಸಿಲ್ಲ? ಏಕೆ NIA ಅವರ ಮೇಲೆ UAPA ಹೊರಿಸಿಲ್ಲ?
    ಉದಾಹರಣೆಗೆ:
  • 2020ರ ದೆಹಲಿ ನರಮೇಧಗಳಲ್ಲಿ ” ದೇಶ್ ಕಾ ಗದ್ದಾರೊಂಕೋ , ಗೋಲಿ ಮಾರೋ ಸಾಲೊಂಕೋ” ಎಂದು ಕರೆ ನೀಡಿದ ಅನುರಾಗ್ ಠಾಕೂರ್ ಮೇಲೆ NIA ದಾಳಿಯಾಗುವುದಿರಲ್ಲಿ , ಆತ ಈಗ ಮೋದಿ ಸರ್ಕಾರದಲ್ಲಿ ಮಂತ್ರಿ.
    ಅಷ್ಟು ಮಾತ್ರವಲ್ಲ ಆಗ ಬೀದಿಬೀದಿಯಲ್ಲಿ ಮೆರವಣಿಗೆ ನಡೆಸಿ ಮುಸ್ಲಿಮರ ಹತ್ಯೆಗೆ ನೇರ ಕಾರಣವಾದ ಭಜರಂಗ ದಳ ಹಾಗೂ ಇತರ ಸಂಘಿ ಸಂಘಟನೆಗಳ ನಾಯಕರಾದ ರಾಗಿಣಿ ತಿವಾರಿ, ದೀಪಕ್ ಸಿಂಗ್ , ಅಂಕಿತ್ ತಿವಾರಿ ಇನ್ನಿತರ ರನ್ನು ಏಕೆ NIA ಈವರೆಗೆ ಬಂಧಿಸಿಲ್ಲ ?
    ಇವರು ಮತ್ತು ಇವರ ಸಹಚರರೇ ಈ ಹಿಂದೆ CAA ವಿರೋಧಿ ಹೋರಾಟಗಾರರ ಮೇಲೂ, ಆ ನಂತರ ರೈತ ಹೋರಾಟದ ಮೇಲೂ ದಾಳಿ ನಡೆಸಿದವರೆಂದು ಪತ್ರಿಕೆಗಳು ಪ್ರಕಟಿಸಿವೆ. ಆದರೆ NIA ಇದರ ಬಗ್ಗೆ ಕುರುಡೂ ಮತ್ತು ಕಿವುಡೂ ಆಗಿರುವುದೇಕೆ ?
    (https://thewire.in/communalism/delhi-2020-the-real-conspiracy-what-the-police-chose-not-to-see)
  • ಉತ್ತರ ಪ್ರದೇಶದಲ್ಲಿ 2015 ರಿಂದ 2021 ರವರೆಗೆ ಮುಸ್ಲಿಮರ ಮೇಲೆ ಸಾಮೂಹಿಕ ದಾಳಿ ನಡೆಸಿ ಕಗ್ಗೊಲೆ ನಡೆಸಿದ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಿಜೆಪಿ/ ಭಜರಂಗ ದಳದ ನಾಯಕರ ಮೇಲೆ ಈವರೆಗೆ NIA ದಾಳಿಯಾಗಿಲ್ಲ . UAPA ಹೇರಿಲ್ಲ. ಬದಲಿಗೆ ತಿಂಗಳೊಪ್ಪತ್ತರಲ್ಲಿ ಅವರಿಗೆ ಜಾಮೀನು ನೀಡಿ ಹೊರಬಿಡಲಾಗಿದೆ. ಅವರು ಹೊರಬಂದಾಗ ಬಿಜೆಪಿಯ – ಭಜರಂಗ ದಳದ ಪದಾಧಿಕಾರಿಗಳು ಅವರಿಗೆ ಹೂ ಮಾಲೆ ಹಾಕಿ ಸ್ವಾಗತಿಸಿದ್ದರು .

(https://www.newsclick.in/lynching-and-bjp-hand-hand)

  • ಹೋದ ವರ್ಷ ಸ್ವಾಮಿ ನರಸಿಂಗಾನಂದ ಎಂಬ ವ್ಯಕ್ತಿ ಹರಿದ್ವಾರದಲ್ಲಿ ಭಾಷಣ ಮಾಡುತ್ತಾ ಬಹಿರಂಗವಾಗಿ ” ಇತರ ಧರ್ಮೀಯರಾದ ಮುಸ್ಲಿಮರ ನರಮೇಧ ಮಾಡಲು ” ಕರೆ ನೀಡಿದ್ದ.
    The Wire ಪತ್ರೀಕೆ ಮಾಡಿರುವ ತನಿಖಾ ವರದಿಯ ಪ್ರಕಾರ ದೆಹಲಿಯಲ್ಲಿ 2020 ರಲ್ಲಿ ನಡೆದ ಮುಸ್ಲಿಂ ನರಮೇಧ ದಲ್ಲಿ ಆತನ ಹಾಜಿಗೋ ಆತನ ಶಿಷ್ಯರ ಪಾತ್ರವಿದೆ.
    ಆತನ ಆಶ್ರಮದ ಮೇಲೇ ಈವರೆಗೆ NIA ದಾಳಿ ಏಕಾಗಿಲ್ಲ? ಆತನ ಬಂಧನವಾದ 15 ದಿನದಲ್ಲೇ ಆತ ಜಾಮೀನಿನ ಮೇಲೆ ಹೊರಬಂದು ಮತ್ತೆ ಅದೇ ರೀತಿ “ಪರಧರ್ಮೀಯರ ಹತ್ಯೆಗೆ ಪ್ರಚೋದನೆ ” ಕೊಡುತ್ತಿದ್ದರೂ ಸರ್ಕಾರ UAPA ಹಾಕಿಲ್ಲವೇಕೆ?
  • ಕರ್ನಾಟಕದಲ್ಲಿ ಕಾಳಿ ಸ್ವಾಮಿ ಎಂಬ ಕಾವಿಧಾರಿ ಒಬ್ಬ ಹಿಂದೂ ಹತ್ಯೆಗೆ ಪ್ರತೀಕಾರವಾಗಿ ಹತ್ತತ್ತು ಮುಸ್ಲಿಮರ ಕಡಿಯಬೇಕೆಂದು ಬಹಿರಂಗವಾಗಿ ಕರೆ ನೀಡಿದ . ಈವರೆಗೆ ಆತನ ಮೇಲೆ NIA ದಾಳಿ ಏಕಾಗಿಲ್ಲ ? ಬಂಧನವೂ ಆಗಿಲ್ಲ ?

  • ” ಇತರ ಧರ್ಮೀಯರ ಹತ್ಯೆಯ ಸಂಚೇ”
    PFI ಮೇಲಿನ ದಾಳಿಗೆ ಕಾರಣವಾದಲ್ಲಿ…….. ” ಇತರ ಧರ್ಮೀಯರಾದ ಮುಸ್ಲಿಮರನ್ನು ಹತ್ಯಗೈದ, ಅದಕ್ಕೆ ಸಂಚು ಮಾಡಿದ ಆರೋಪದ ಮೇಲೆ ಸಂಘಿ ಹಂತಕರನ್ನು ಏಕೆ NIA ಬಂಧಿಸುತ್ತಿಲ್ಲ” ..
  • ಮೂರನೆಯದಾಗಿ PFI ಮೇಲಿರುವ ಮತ್ತೊಂದು ಆರೋಪ ” ಗಣ್ಯರನ್ನು ಗುರಿಯಾಗಿಸಿ ಸ್ಪೋಟಕಗಳನ್ನು ಸಂಗ್ರಹಿಸುವುದು” ..
    PFI ಆ ರೀತಿ ಅಪರಾಧ ಮಾಡಿದ್ದರೇ ಖಂಡಿತಾ ಶಿಕ್ಷೆಯಾಗಲೇ ಬೇಕು ..
    ಆದರೆ ಬಿಜೆಪಿ ಸರ್ಕಾರ ಆ ರೀತಿ “ಸ್ಪೋಟಕ ಸಂಗ್ರಹದ ಆರೋಪ ” ಹೊತ್ತವರನ್ನೆಲ್ಲಾ ಸಮಾನವಾಗಿ ಅಪರಾಧಿಗಳೆಂದು ಪರಿಗಣಿಸಿದೆಯೇ ?

  • ಉದಾಹರಣೆಗೆ :
  • 2007ರ ಮಾಲೆಗಾಂವ್ ಸ್ಪೋಟ ಪ್ರಕರಣದಲ್ಲಿ 40 ಕ್ಕೂ ಹೆಚ್ಚು ಅಮಾಯಕರ ಹತ್ಯೆಯಾಗಿತ್ತು. ತನಿಖೆಯಲ್ಲಿ ಕಂಡುಬಂದ ವಿಷಯವೆಂದರೆ ಈ ಸ್ಫೋಟ ಪ್ರಕರಣದಲ್ಲಿ ನೇರವಾಗಿ ಭಾಗಿಯಾದವರು ಪ್ರಗ್ಯಾ ಸಿಂಗ್ ಠಾಕೂರ್ , ಕರ್ನಲ್ ಪುರೋಹಿತ್ ಮತ್ತು ಇತರ ಹಲವಾರು ಸಂಘ ಪರಿವಾರಕ್ಕೆ ಸೇರಿದ ಪಧಾಧಿಕಾರಿಗಳು .

ಸ್ವಾಮಿ ಅಸೀಮಾನಂದ ಎಂಬ ಆರೋಪಿ ಕೊಟ್ಟ ಹೇಳಿಕೆಯ ಪ್ರಕಾರ 2004 ರಿಂದ ಈ ದೇಶದಲ್ಲಿ ನಡೆದ ನಾಂದೇಡ್ ಸ್ಫೋಟ, ಸಂಜೋತಾ ಎಕ್ಸ್ಪ್ರೆಸ್ ಸ್ಫೋಟ , ಹೈದರಾಬಾದ್ ಸ್ಫೋಟ , ಅಜ್ಮಿರ್ ದರ್ಗಾ ಸ್ಫೋಟ..ಇತ್ಯಾದಿಗಳಲ್ಲಿ ಆರೆಸ್ಸೆಸ್ಸಿನ ಅತ್ಯುಚ್ಚ ಪದಾಧಿಕಾರಿಗಳ ಸಂಚಿತ್ತು.
ಕರ್ನಲ್ ಪುರೋಹಿತ್ ಆದರೆ ಮಾಲೆಗಾಂವ್ ಹಾಗೂ ಇನ್ನಿತರ ಸ್ಫೋಟಗಳಿಗೆ ಸೈನ್ಯದ ದಾಸ್ತಾನಿನಲ್ಲಿದ್ದ RDX ಸರಬರಾಜು ಮಾಡಿದ್ದನ್ನು ಒಪ್ಪಿಕೊಂಡಿದ್ದು ಮಾತ್ರವಲ್ಲದೆ ಇದಕ್ಕೆ ಇನ್ನೂ ಮೇಲಧಿಕಾರಿಗಳೂ ಹೊಣೆ ಎಂದು ಹೇಳಿದ್ದ.
(https://www.livemint.com/Politics/FiO9Z5xFcox53cdynDOCAO/Malegaon-blast-case-Sadhvi-Pragya-Lt-Col-Prasad-Purohit-to.html)
ಅವರ ಮೇಲೆ ಪ್ರಾರಂಭದಲ್ಲಿ NIA ಕೇಸುಗಳನ್ನು ಹಾಕಿದ್ದರೂ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅವರ ಮೇಲೆ ಇದ್ದ ಪ್ರಕರಣಗಳನ್ನು ಸಡಿಲಗೊಳಿಸಲಾಯಿತು .
ಇದನ್ನು NIA ವಕೀಲರಾಗಿದ್ದ ರೋಹಿಣಿ ಸಾಲಿಯಾನ್ ಅವರೇ ಬಹಿರಂಗ ಪಡಿಸಿದ್ದರು.
(https://indianexpress.com/article/india/india-news-india/rohini-salian-names-nia-officer-who-told-her-to-go-soft/)
ಹಾಗೂ “ಸ್ಪೋಟಕ ಸಂಗ್ರಹ ಮಾಡಿದ ಹಾಗೂ ಸ್ಫೋಟ ಗೊಳಿಸಿ ಇತರ ಧರ್ಮೀಯರನ್ನು ಕ್ರೂರವಾಗಿ ಕೊಲೆ ಮಾಡಿದ” ಆರೋಪ ಹೊತ್ತ ಪ್ರಗ್ಯಾ ಸಿಂಗ್ ಅನ್ನು ಬಿಜೆಪಿ MP ಮಾಡಿ ಸದನದಲ್ಲಿ ಕೂರಿಸಿತು.

  • ತೀರಾ ಇತ್ತೀಚಿಗೆ ಯಶವಂತ್ ಶಿಂಧೆ ಎಂಬ ೨೫ ವರ್ಷಗಳ ಕಾಲ ಆರೆಸ್ಸೆಸ್ ನಲ್ಲಿ ಕೆಲಸ ಮಾಡಿದ ಕಾರ್ಯಕರ್ತ ಒಂದು ಅಫಿಡವಿಟ್ ಮೇಲೆ ಪ್ರಮಾಣ ಮಾಡಿ ಹೇಗೆ ಆರೆಸ್ಸೆಸ್ ದೇಶದಲ್ಲ್ ನಡೆದ ಹಲವಾರು ಬಾಂಬ್ ಬ್ಲಾಸ್ಟ್ ಗಳಿಗೆ ಕಾರಣ ಎಂದು ಬಹಿರಂಗ ಪಡಿಸಿದ್ದಾರೆ.
    (https://www.siasat.com/rss-involved-in-series-of-bomb-blasts-in-india-claims-ex-member-2403080/)
    ಹಾಗಿದ್ದಲ್ಲಿ ” *ಸ್ಪೋಟಕ ಸಂಗ್ರಹ ಹಾಗೂ ಸ್ಪೋಟದಲ್ಲಿ ಭಾಗಿಯಾದ ಆರೋಪದ ಮೇಲೆ ” NIA ಏಕೆ ಆರೆಸ್ಸೆಸ್ ಕಚೇರಿಗಳ ಮೇಲೆ ದಾಳಿ ಮಾಡಿಲ್ಲ? ಕನಿಷ್ಠ ಆರೆಸ್ಸೆಸ್ ಪದಾಧಿಕಾರಿಗಳನ್ನು ವಿಚಾರಣೆಗೂ ಕರೆದಿಲ್ಲ ?
    -ಹಾಗೆಯೇ ” ಇತರ ಧರ್ಮೀಯರಾದ ಮುಸ್ಲಿಮರನ್ನು
    2002ರ ಗುಜರಾತ್ ನರಮೇಧದಲ್ಲಿ ಕ್ರೂರವಾಗಿ ಕೊಂದ ಅಪರಾಧ ಮಾಡಿ ಶಿಕ್ಷೆ ಅನುಭವಿಸುತ್ತಿದ್ದ ಮಾಯಾ ಕೊಡ್ನಾನಿ ಹಾಗೂ ಬಾಬಾ ಭಜರಂಗಿಗೆ ಶಾಶ್ವತಾ ಜಾಮೀನು ಕೊಟ್ಟು ಬಿಡುಗಡೆಯಾಗಲು ಬಿಜೆಪಿ ಸಹಕರಿಸಿತು.

(https://scroll.in/article/876385/kingpin-to-not-guilty-how-maya-kodnani-came-to-be-acquitted-in-naroda-patiya-massacre-case)

  • ನಾಲ್ಕನೆಯದಾಗಿ ” ಸಾರ್ವಜನಿಕ ಆಸ್ತಿಪಾಸ್ತೀ ನಾಶದ ಮೂಲಕ ಭೀತಿ ಸೃಷ್ಟಿಸುವುದು ” PFI ಮೇಲೆ NIA ದಾಳಿಗೆ ಮತ್ತೊಂದು ಕಾರಣ.
    ಅದು ಕೂಡಾ ಅಪರಾಧವೇ . ಯಾರೇ ಮಾಡಿದ್ದರೂ ಅವರನ್ನು ಬಂಧಿಸಿ ಶಿಕ್ಷೆ ಕೊಡಿಸಬೇಕು .
    ಆದರೆ ಈ ವಿಷಯದಲ್ಲೂ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕಾನೂನನ್ನು ಸಮಾನವಾಗಿ ಅನ್ವಯಿಸುತ್ತಿದೆಯೇ? ಇತ್ತಿಚೆಗೆ ಕರ್ನಾಟಕದ ವಿದ್ಯಮಾನಗಳನ್ನು ನೋಡಿದರೂ ಸಾಕು ಅದು ಎಷ್ಟು ಏಕಪಕ್ಷೀಎಯವಾಗಿ ಮತ್ತು ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಿದೆ ಎಂದು ಸಾಬೀತಾಗುತ್ತದೆ.
    NIA ಅಧಿಕಾರಿಗಳು PFI ಮೇಲೆ ದಾಳಿ ಮಾಡುತ್ತಿದ್ದ ಸಮಯದಲ್ಲೇ ಕರ್ನಾಟಕದ ಬಿಜೆಪಿ ಸರ್ಕಾರ ಅದೇ ಬಗೆಯ ಅಪರಾಧಗಳನ್ನು ಮಾಡಿದ ಸಂಘಪರಿವಾರದ ಕಾರ್ಯಕರ್ತರ ಮೇಲೆ ಹಾಕಿದ್ದ ಕೇಸುಗಳನ್ನೆಲ್ಲಾ ತೆಗೆದುಕೊಳ್ಳುತ್ತಿತ್ತು ..
    ಹಾಗಿದ್ದಲ್ಲಿ PFI ಮೇಲೆ NIA ದಾಳಿಯ ನಿಜವಾದ ಉದ್ದೇಶವೇನು ? ಅದನ್ನು ಮತ್ತೆ ವಿವರಿಸುವ ಅಗತ್ಯವಿದೆಯೇ?
    ಜಸ್ಟ್ ಆಸ್ಕಿಂಗ್
Join Whatsapp